ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಎಪ್ರಿಲ್ 23ರಂದು ನಡೆದಿದ್ದ ಭಾರತೀಯ ಪ್ರಜೆ ಕುಲ್ವಿಂದರ್ ಸಿಂಗ್ ಸೊಹಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಯುವಕನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.
ಎಪ್ರಿಲ್ 23ರಂದು ವೈಟ್ರಾಕ್ ನಗರದಲ್ಲಿ ಇಬ್ಬರು ಯುವಕರ ನಡುವೆ ಆರಂಭಗೊಂಡ ಮಾತಿನ ಚಕಮಕಿ ಯಲ್ಲಿ ಓರ್ವನಿಗೆ ಚೂರಿಯಿಂದ ಇರಿಯಲಾಗಿತ್ತು. ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಭಾರತ ಮೂಲದ ಕುಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿತ್ತು. ಒಂದು ವಾರದ ಕಾರ್ಯಾಚರಣೆಯ ಬಳಿಕ 28 ವರ್ಷದ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಮಾಹಿತಿ ನೀಡಿದ್ದಾರೆ.