ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿ ದಿನ ತಾಪಮಾನ ಏರುತ್ತಲೇ ಇದ.. ಇದರಿಂದ ಕುಡಿಯುವದಕ್ಕೆ ಸರಿಯಾಗಿ ನೀರು ಸಿಗುತ್ತಿಲ್ಲ , ಇನ್ನು ತರಕಾರಿ, ಸೊಪ್ಪು, ಹಣ್ಣು ಬೆಳೆಸಬೇಕು ಅಂದ್ರೆ ರೈತರು ಪರದಾಡುವ ಪರಿಸ್ಥಿತಿ ಮುಂದಾಗಿದೆ.. ಇದರಿಂದ ಇದರಿಂದ ಜನರ ಜೇಬಿಗೆ ಕತ್ತರಿ ಬೀಳಲು ಶುರುವಾಗಿದೆ..
ಏರುತ್ತಲೇ ಇರುವ ತರಕಾರಿ ಬೆಲೆ ಜನರ ನಿತ್ಯದ ಜೀವನದಲ್ಲಿ ತಳಮಳಕ್ಕೆ ಕಾರಣವಾಗಿದೆ. ಅದ್ಯಾಕೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ..
ಬೀನ್ಸ್, ಕ್ಯಾರೆಟ್, ಉರುಳಿಕಾಯಿ, ಬದನೆಕಾಯಿ, ದಪ್ಪ ಮೆಣಸಿನಕಾಯಿ ಎಲ್ಲಾ ಬೆಲೆ ದುಬಾರಿ.. ಈಗಾಗಲೇ ಒಂದು ಕೆಜಿ ತರಕಾರಿ ಕೊಳ್ಳುವಲ್ಲಿ ಅರ್ಧ ಕೇಜಿ ಖರೀದಿ ಮಾಡುವ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ. ರಾಜಧಾನಿಗೆ ರಾಮನಗರ, ಮಾಗಡಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ನಂದಗುಡಿ, ಕನಕಪುರ ಸೇರಿದಂತೆ ವಿವಿಧೆಡೆಯಿಂದ ಪೂರೈಕೆ ಆಗುವ ತರಕಾರಿ ಪ್ರಸ್ತುತ ಗಣನೀಯವಾಗಿ ಇಳಿಮುಖವಾಗಿದೆ.
ಬಿರುಬಿಸಿಲು, ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ಬತ್ತಿರುವುದು ತರಕಾರಿ ಬೆಳೆಗಳ ಇಳುವರಿ ತಗ್ಗಿಸಿದೆ. ಹೀಗಾಗಿ ಪೂರೈಕೆ ಕಡಿಮೆಯಾಗಿದೆ. ದಾವಣಗೆರೆ, ಪರರಾಜ್ಯಗಳಿಂದ ತರಕಾರಿ ಬರುತ್ತಿದ್ದು, ಸಾಗಾಟದ ವೆಚ್ಚದಿಂದ ಗ್ರಾಹಕರಿಗೆ ಬೆಲೆ ಇನ್ನಷ್ಟು ಹೊರೆಯಾಗಿಸುತ್ತಿವೆ. ಸಗಟು ಮಾರುಕಟ್ಟೆಯೂ ಬೆಲೆ ಏರಿಕೆಗೆ ನಲುಗಿದೆ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ವರ್ತಕ ರಾಜು ಹೇಳುತ್ತಾರೆ. ಬೀನ್ಸ್ ಬೆಳೆಯಲು ಹೆಚ್ಚಿನ ನೀರು ಬೇಕು.
ಸದ್ಯದ ಬರ ಪರಿಸ್ಥಿತಿಯಲ್ಲಿ ಹೆಚ್ಚಿನದಾಗಿ ಬೀನ್ಸ್ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೆಲೆ ₹180 ರಿಂದ ₹200 ರವರೆಗೂ ಏರಿಕೆಯಾಗಿದೆ. ಸೊಪ್ಪು, ಮೂಲಂಗಿ, ನವಿಲುಕೋಸು, ಹೀರೆಕಾಯಿ ಬೆಲೆಗಳು ಹೆಚ್ಚುತ್ತಿವೆ. ಸದ್ಯ ಕೇಜಿಗೆ ಇವುಗಳ ಬೆಲೆ ₹60 ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದರು. ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆ, ಇಳುವರಿ ಕುಂಠಿತ, ಬೇಡಿಕೆ ಕುಸಿತ ಪರಿಣಾಮ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ.
ಯಾವ ತರಕಾರಿ ಎಷ್ಟು ದರ ಇದೆ ಅಂತ ನೋಡುವುದಾದರೆ..
ಹುರುಳಿಕಾಯಿ ಕೆಜಿಗೆ 160 ರಿಂದ 200 ರೂ ತಲುಪಿದೆ,
ಕ್ಯಾರೆಟ್ ಕೆಜಿಗೆ 80 ರೂಪಾಯಿ,
ಟಮೋಟೋ ಕೆಜಿಗೆ 60 ರೂಪಾಯಿ,
ಕ್ಯಾಪ್ಸಿಕಂ ಕೆಜಿಗೆ 120 ರೂಪಾಯಿ,
ಆಲೂಗೆಡ್ಡೆ ಕೆಜಿಗೆ 60 ರೂಪಾಯಿ,
ಬದನೆಕಾಯಿ ಕೆಜಿಗೆ 70 ರೂಪಾಯಿ,
ಗೆಡ್ಡೆಕೋಸ್ ಕೆಜಿಗೆ 60 ರೂಪಾಯಿ
ಸೌತೆಕಾಯಿ ಕೆಜಿಗೆ 50 ರೂಪಾಯಿ,
ಬದನೆ ಕೆಜಿಗೆ 80 ರೂಪಾಯಿ,
ನುಗ್ಗೆಕಾಯಿ ಕೆಜಿಗೆ 80 ರೂಪಾಯಿ.,
ಬೆಳ್ಳುಳ್ಳಿ ಕೆಜಿಗೆ 250ರೂಪಾಯಿ.,
ಹಾಗಲಕಾಯಿ ಕೆಜಿಗೆ 70 ರೂ.,
ಬೆಂಡೆಕಾಯಿ ಕೆಜಿಗೆ 90 ರೂ.
ಶುಂಠಿ ಪ್ರತಿ ಕೆಜಿಗೆ 160 ರೂಪಾಯಿ,
ನಿಂಬೆಹಣ್ಣು ಹತ್ತು, ಎಂಬತ್ತು ರೂಪಾಯಿ.
ಈ ನಡುವೆ ಚಿಲ್ಲರೆ ವ್ಯಾಪಾರಿಗಳು ಸಗಟು ಮಾರುಕಟ್ಟೆಯಿಂದ ತರಕಾರಿ ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ತಂದ ತರಕಾರಿಗಳು ಒಣಗಿ ಹೋಗುತ್ತವೆ. ಹಾಗಾಗಿ ಕೆಲ ದಿನ ಮಾರಾಟ ಮಾಡದಿರುವುದೆ ಒಳಿತು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ವರ್ಷ ಮಳೆ ಕಡಿಮೆ ಬಂದಿರುವುದರಿಂದ , ಪೂರೈಕೆ ಕಡಿಮೆ ಇರುವುದರಿಂದ ಹಾಗೂ ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚಳ ಇರುವುದರಿಂದ , ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳ ಆಗಿದೆ , ಬೆಲೆ ಕೇಳಿ ಜನಸಾಮಾನ್ಯರು ಶಾಕ್ ಆಗುವಂತೆ ಆಗಿದೆ.