ನಟಿ ಮೃಣಾಲ್ ಠಾಕೂರ್ ಸದ್ಯ ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ರಾಮ ಸಿನಿಮಾದ ಬಳಿಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ನಟಿ ಇದೀಗ ಸಂದರ್ಶನವೊಂದರಲ್ಲಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಅನೇಕ ಸಿನಿಮಾಗಳ ಅವಕಾಶ ಕೈತಪ್ಪಿ ಹೋಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆರಿಯರ್ ಶುರುವಿನಲ್ಲಿ ಆಡಿಷನ್ ಕೊಡುವಾಗ ಹಳ್ಳಿ ಹುಡುಗಿಯಂತೆ ಕಾಣ್ತಾಳೆ, ನಮ್ಮ ಸಿನಿಮಾಗೆ ಸೂಟ್ ಆಗಲ್ಲ. ಸಿನಿಮಾದಲ್ಲಿ ಮಾಡ್ರರ್ನ್ ಆಗಿ ಕಾಣಿಸಿಕೊಳ್ಳಬೇಕು ಎಂದು ಕಾರಣ ನೀಡಿ ಸೆಲೆಕ್ಟ್ ಮಾಡಲಿಲ್ಲ ಎಂದು ನಟಿ ಹೇಳಿದ್ದಾರೆ.
ಟಿವಿ ಕಾರ್ಯಕ್ರಮಗಳೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿ ಮೃಣಾಲ್ ಠಾಕೂರ್ ಗೆ ಸೀತಾ ರಾಮಂ ಸಿನಿಮಾ ಬಳಿಕ ಭಾರೀ ಜನಪ್ರಿಯತೆ ಸಿಕ್ಕಿದೆ, ಜರ್ಸಿ, ಘೋಸ್ಟ್ ಸ್ಟೋರೀಸ್, ಹಾಯ್ ನನ್ನಾ, ದಿ ಫ್ಯಾಮಿಲಿ ಸ್ಟಾರ್ ನಂತಹ ಚಲನಚಿತ್ರಗಳೊಂದಿಗೆ ಮೃಣಾಲ್ ಠಾಕೂರ್ ಅಭಿಮಾನಿಗಳ ಮನಗೆದ್ದು, ಆಕೆಯ ಅಭಿನಯಕ್ಕೆ ಪ್ರೇಕ್ಷಕರು ಸೇರಿದಂತೆ ವಿಮರ್ಶಕರು ಫಿದಾ ಆಗಿದ್ದಾರೆ.