ಸೆಲೆಬ್ರಿಟಿಗಳು ತಮ್ಮ ಫಿಟ್ ನೆಸ್ ಗಾಗಿ ಸಾಕಷ್ಟು ತ್ಯಾಗಗಳನ್ನು ಮಾಡುತ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಬಾಲಿವುಡ್ ನಟ ಜಾನ್ ಅಬ್ರಹಾಂ. ಇವರು ಕಳೆದ 25 ವರ್ಷಗಳಿಂದ ಸಿಹಿ, ಮಾಂಸಾಹಾರ ಹಾಗೂ ಮದ್ಯ ಸಿಗರೇಟ್ ಗಳಿಂದ ದೂರವಿರೋದಾಗಿ ಬ್ರಿಟನ್-ಪಾಕ್ ನಟ ಆ್ಯಲಿ ಖಾನ್ ಅಚ್ಚರಿ ಹೊಹಾಕಿದ್ದಾರೆ.
ಜಾನ್ ಅಬ್ರಹಾಂ ಅವರು ಸಂಪೂರ್ಣವಾಗಿ ಸಿಹಿಯಿಂದ ದೂರ ಇದ್ದಾರೆ. ಬ್ರಿಟಿಷ್-ಪಾಕಿಸ್ತಾನಿ ನಟ ಅಲಿ ಖಾನ್ ಅವರು ಜಾನ್ ಅಬ್ರಹಾಂ ಅವರೊಂದಿಗೆ ಕೆಲಸ ಮಾಡಿದ್ದನ್ನು ಇತ್ತೀಚೆಗೆ ನೆನಪಿಸಿಕೊಂಡರು. ಜಾನ್ ಒಬ್ಬ ಸನ್ಯಾಸಿಯಂತೆ ಬದುಕುತ್ತಾರೆ. ಅದು ಚಲನಚಿತ್ರೋದ್ಯಮದಲ್ಲಿ ಅವರ ನಿರಂತರ ಯಶಸ್ಸಿನ ರಹಸ್ಯವಾಗಿದೆ ಎಂದಿದ್ದಾರೆ . ಜೋಯಾ ಅಖ್ತರ್ ನಿರ್ದೇಶನದ ‘ಲಕ್ ಬೈ ಚಾನ್ಸ್’ ಸಿನಿಮಾದಲ್ಲಿ ಅಲಿ ಖಾನ್ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ತೆಹ್ರಾನ್’ ಸಿನಿಮಾದಲ್ಲಿ ಜಾನ್ ಜೊತೆ ಕೆಲಸ ಮಾಡೋ ಅವಕಾಶ ಆ್ಯಲಿಗೆ ಸಿಕ್ಕಿದೆ.
ಜಾನ್ ಅಬ್ರಹಾಂ ಶಿಸ್ತನ್ನು ನೋಡಿ ದಂಗಾಗಿರುವುದಾಗಿ ಅಲಿ ಹೇಳಿದ್ದಾರೆ. ಜಾನ್ಗೆ ನಿಜವಾಗಿಯೂ ಪ್ರತಿಭೆ ಇದೆಯೇ ಅಥವಾ ಇಷ್ಟು ವರ್ಷಗಳ ಕಾಲ ಅವರು ತನ್ನ ಮೈಕಟ್ಟುಹೇಗೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ಅಲಿಯನ್ನು ಕೇಳಲಾಯಿತು. ನಿಮ್ಮಲ್ಲಿ ಟ್ಯಾಲೆಂಟ್ ಇಲ್ಲ ಎಂದರೆ ಚಿತ್ರರಂಗದಲ್ಲಿ ಹೆಚ್ಚು ವರ್ಷ ಬದುಕೋಕೆ ಆಗಲ್ಲ. ಜಾನ್ ಅವರು ಈ ವಯಸ್ಸಲ್ಲೂ ಶರ್ಟ್ ತೆಗೆದು ಪೋಸ್ ಕೊಡುತ್ತಾರೆ ಎಂದರೆ ಅದಕ್ಕೆ ಕಾರಣ ಕಳೆದ 25 ವರ್ಷಗಳಲ್ಲಿ ಅವರು ಸಿಹಿಯನ್ನೇ ಟೇಸ್ಟ್ ಮಾಡಿಲ್ಲ ಎಂದಿದ್ದಾರೆ.
ಸಕ್ಕರೆ ಮಾತ್ರವಲ್ಲದೇ, ಆಲ್ಕೋಹಾಲ್ ರುಚಿಯನ್ನೂ ನೋಡಿಲ್ಲ. ಅವರು ಎಂದಿಗೂ ಧೂಮಪಾನ ಮಾಡಿಲ್ಲ, ಮಾತ್ರವಲ್ಲದೇ ಸಂಪೂರ್ಣ ಸಸ್ಯಾಹಾರಿ. ಅವರು ಮಾಂಸ ಸೇವನೆ ಮಾಡುವುದೇ ಇಲ್ಲ ಎಂದಿದ್ದಾರೆ. ಇನ್ನು ಅಬ್ರಹಾಂ ಪ್ರಕಾರ ಜೀವನದಲ್ಲಿ ಉತ್ತಮ ಆಹಾರ, ಉತ್ತಮ ವ್ಯಾಯಾಮ ಮತ್ತು ಉತ್ತಮ ನಿದ್ರೆ ಬೇಕು.. ಅವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೂ ಟ್ರೈಪಾಡ್ ಬೀಳುತ್ತದೆ. ಅವರು ದಿನನಿತ್ಯ ಬೆಳಿಗ್ಗೆ 4:30 ಕ್ಕೆ ಏಳುತ್ತಾರೆ. 27 ವರ್ಷಗಳಿಂದ ಇದೇ ದಿನಚರಿಯನ್ನು ಪಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.