ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಚಿಕ್ಕಮಗಳೂರಿನ ಕಳಸದಲ್ಲಿ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಹಸೆಮಣೆ ಏರಿದ್ದಾರೆ.
ಮೈಸೂರು ಮೂಲದ ಹುಡುಗ ಅರುಣ್ ಕುಮಾರ್ ಅವರನ್ನು ನಟಿ ವರಿಸಿದ್ದು, 2 ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಮೇ 1ರಂದು ಮಾನ್ವಿತಾ ,ಅರುಣ್ ಮದುವೆ ಕೊಂಕಣಿ ಸಂಪ್ರದಾಯದಂತೆ ನಡೆದಿದೆ. ಅದಕ್ಕೂ ಮುನ್ನ ಏಪ್ರಿಲ್ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅರುಣ್ ಅವರು ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ಬಳಿಕವೂ ಮಾನ್ವಿತಾ ಅವರು ಸಿನಿಮಾರಂಗದಲ್ಲಿ ಇರಲಿದ್ದಾರೆ ಎಂದು ಅರುಣ್ ಹೇಳಿದ್ದಾರೆ.
ಅರುಣ್ ಹಾಗೂ ಮಾನ್ವಿತಾ ಕಾಮತ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು ತಾಯಿ ನೋಡಿ ಮೆಚ್ಚಿದ ಹುಡುಗನನ್ನೇ ನಟಿ ವರಿಸಿದ್ದಾರೆ.
ಮಾನ್ವಿತಾ ಕಾಮತ್ ಅವರ ಮದುವೆಯನ್ನು ಅವರ ಸೋದರ ಮಾವಂದಿರೇ ಮುನ್ನಡೆಸಿಕೊಟ್ಟಿದ್ದಾರೆ. 2 ಕುಟುಂಬದವರು, ಆಪ್ತರು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ದುನಿಯಾ ಸೂರಿ ನಿರ್ದೇಶನದ ಸೂಪರ್ಹಿಟ್ ಚಿತ್ರ ‘ಕೆಂಡಸಂಪಿಗೆ’ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ನಟಿ ಮಾನ್ವಿತಾ ಕಾಮತ್ ನಂತರ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು.
ನಟಿಯನ್ನು ಮದುವೆ ಮಂಟಪಕ್ಕೆ ಎತ್ತಿಕೊಂಡು ಬಂದ ಸೋದರ ಮಾವ
ಮಾನ್ವಿತಾ ಕಾಮತ್ ಮದುವೆಯಲ್ಲಿ ಭಾಗಿಯಾದ ನಿರಂಜನ್ ದೇಶ್ ಪಾಂಡೆ