ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಹಾಗೂ ರಣಭೀರ್ ಸಿಂಗ್ ದಂಪತಿ ಸದ್ಯದಲ್ಲೇ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ತಾಯಿಯಾಗಲಿದ್ದು ಈ ಹಿನ್ನೆಲೆಯಲ್ಲಿ ನಟಿ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇದೀಗ ದೀಪಿಕಾ ಕುರಿತಾದ ಹೊಸ ವಿಚಾರವೊಂದು ಹೊರಬಿದ್ದಿದ್ದು, ಮೇ ಬಳಿಕ ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ದೀಪಿಕಾ ಸಿಂಗಂ 3, ಪ್ರಭಾಸ್ ಜೊತೆಗಿನ ‘ಕಲ್ಕಿ 2898 ಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೆಗ್ನೆಂಟ್ ದೀಪಿಕಾ ವರ್ಕ್ ಡೆಡಿಕೇಷನ್ನಿಂದ ಒಪ್ಪಿಕೊಂಡಿರುವ ಚಿತ್ರಕ್ಕೆ ತೊಂದರೆಯಾಗಬಾರದು ಎಂದು ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಡಿ’ ಚಿತ್ರದ ಪ್ರಚಾರಕ್ಕೆ ಕಮಿಟ್ ಆಗಿದ್ದಾರೆ. ಅದಕ್ಕೆ ಚಿತ್ರ ತಂಡವು ಆಕೆಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್ ಅನ್ನು ಮುಂಚಿತವಾಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಶೂಟಿಂಗ್ ಮತ್ತು ಪ್ರಚಾರಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೇ ತಿಂಗಳ ಬಳಿಕ ದೀಪಿಕಾ ಪಡುಕೋಣೆ ಚಿತ್ರರಂಗದಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ.