ಗುಜರಾತ್ ಟೈಟನ್ಸ್ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಜಿಟಿ ವಿರುದ್ಧದ ಪಂದ್ಯಕ್ಕೂ ಮುನ್ನ ಚುಟುಕು ಕ್ರಿಕೆಟ್ ನಲ್ಲಿ 12,500 ರನ್ ಗಳಿಸಲು ರನ್ ಮಷೀನ್ ಗೆ 6 ರನ್ ಗಳ ಅವಶ್ಯಕತೆ ಇತ್ತು.
ಆದರೆ ಪಂದ್ಯದಲ್ಲಿ 42 ರನ್ ಸಿಡಿಸಿದ ಕೊಹ್ಲಿ ಅರ್ಧಶತಕ ವಂಚಿತರಾದರೂ, ಈ ಸಾಧನೆ ಮಾಡಿದ ಮೊದಲ ಭಾರತದ ಆಟಗಾರ ಎಂಬ ಮೈಲುಗಲ್ಲು ನಿರ್ಮಿಸಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ 12 ಸಾವಿರ ರನ್ ಸಿಡಿಸಿದ ಭಾರತದ ಏಕೈಕ ಆಟಗಾರ ಎಂಬ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ, ಈಗ 12,500 ರನ್ ಗಡಿ ತಲುಪಿದ್ದಾರೆ. ವಿರಾಟ್ ಕೊಹ್ಲಿ, 387 ಪಂದ್ಯಗಳಲ್ಲಿ 130 ಸ್ಟ್ರೆಕ್ ರೇಟ್ ನಲ್ಲಿ ಈ ಸಾಧನೆ ಮಾಡಿದ್ದು, 9 ಶತಕ ಹಾಗೂ 95 ಅರ್ಧಶತಕ ಸಿಡಿಸಿದ್ದಾರೆ.
2007ರಲ್ಲಿ ಡೆಲ್ಲಿ ತಂಡದ ಪರ ತನ್ನ ಟಿ20 ಕೆರಿಯರ್ ಆರಂಭಿಸಿದ ವಿರಾಟ್ ಕೊಹ್ಲಿ, 2008ರ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡು, 17 ವರ್ಷಗಳ ಕಾಲ ಬೆಂಗಳೂರು ಫ್ರಾಂಚೈಸಿ ಪರ ಆಡುತ್ತಿರುವ ಕೊಹ್ಲಿ, ಐಪಿಎಲ್ ಟೂರ್ನಿಯಲ್ಲಿ 7000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿಅತಿಹೆಚ್ಚುರನ್ಗಳಿಸಿದಬ್ಯಾಟರ್ಸ್
* 14,562 ರನ್- ಕ್ರಿಸ್ ಗೇಲ್ – ವೆಸ್ಟ್ ಇಂಡೀಸ್ (463 ಪಂದ್ಯ)
* 13,360 ರನ್- ಶೋಯಿಬ್ ಮಲಿಕ್- ಪಾಕಿಸ್ತಾನ (542 ರನ್)
* 12,900 ರನ್- ಕೈರೋನ್ ಪೋಲಾರ್ಡ್ – ವೆಸ್ಟ್ ಇಂಡೀಸ್ (660 ಪಂದ್ಯ)
* 12,536 ರನ್- ವಿರಾಟ್ ಕೊಹ್ಲಿ-ಭಾರತ (387 ಪಂದ್ಯ)
* 12,319 ರನ್- ಅಲೆಕ್ಸ್ ಹೇಲ್ಸ್- ಇಂಗ್ಲೆಂಡ್ (449 ರನ್)