ನಾಗಿಣಿ ಧಾರವಾಹಿಯ ನಟಿ, ‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿ ದೀಪಿಕಾ ದಾಸ್ ಇತ್ತೀಚೆಗೆ ದೀಪಕ್ ಅವರನ್ನು ವರಿಸಿದ್ದಾರೆ. ಸದ್ಯ ಈ ಜೋಡಿ ವಿದೇಶಕ್ಕೆ ಹಾರಿದ್ದು ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ವಿದೇಶ ಪ್ರವಾಸದ ಸುಂದರ ಫೋಟೋಗಳನ್ನು ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪತಿ ದೀಪಕ್ ಜೊತೆ ಐಲ್ಯಾಂಡ್ ನ ಪುಕೆಟ್ಗೆ ದೀಪಿಕಾ ದಾಸ್ ತೆರಳಿದ್ದಾರೆ. ಬೋಟ್ ಮಧ್ಯೆ ಕುಳಿತು ಪತಿ ಜೊತೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ನಟಿ ತಾಳಿ ಧರಿಸದೇ ಇರೋದನ್ನು ಗಮನಿಸಿ ಯಾವ ದೇಶಕ್ಕೆ ಹೋದ್ರು ನಮ್ಮ ಸಂಸ್ಕೃತಿ ಮರಿಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಗೋವಾದಲ್ಲಿ ಮದುವೆಯಾಗುವ ಕನಸು ಹೊಂದಿದ್ದ ದೀಪಿಕಾ ದಾಸ್ ಅದರಂತೆ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಉದ್ಯಮಿ ದೀಪಕ್ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಸ್ನೇಹಿತರಾಗಿದ್ದ ದೀಪಿಕಾ ಹಾಗೂ ದೀಪಕ್ ಆ ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದು ಇದೀಗ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.