ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ್ದರು. ಜಾರ್ಖಂಡ್ ಮತ್ತು ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಅಯೋಧ್ಯೆಗೆ ತೆ ರಳಿರಾಮಲಲ್ಲಾ ದರ್ಶನ ಪಡೆದರು. ಬಳಿಕ ಅಯೋಧ್ಯೆಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಚುನಾವಣಾ ಕಣದಲ್ಲಿ ಧಣಿವರಿಯದೇ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರ ಕಾರ್ಯಗಳ ನಡುವೆ ಅವರು ಬಾಲರಾಮನ ದರ್ಶನ ಪಡೆದರು. ಜಾರ್ಖಂಡ್ ಮತ್ತು ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ನೇರ ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದು ಧೀರ್ಘ ದಂಡ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ರಾಮಮಂದಿರ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ಮೊದಲ ಬಾರಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆ ಅಯೋಧ್ಯೆಯನ್ನು ಅಲಂಕೃತಗೊಳಿಸಲಾಗಿತ್ತು. ರಾಮಮಂದಿರ ಸುತ್ತಮುತ್ತಲಿನ ಪ್ರದೇಶ, ರಸ್ತೆಗಳನ್ನು ಶೃಂಗರಿಸಲಾಗಿತ್ತು. ಎಲ್ಲ ಕಡೆ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರುವ ಕಟೌಟ್ಗಳನ್ನು ಹಾಕಲಾಗಿತ್ತು.
ಸಂಜೆ ರಾಮಲಲ್ಲಾ ದರ್ಶನ ಪಡೆದ ಮೋದಿ ಸುಗ್ರೀವ ಕೋಟೆಯಿಂದ ಲತಾ ಚೌಕ್ ತನಕ ರೋಡ್ ವರೆಗೂ ಎರಡು ಕಿಲೋ ಮೀಟರ್ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿ ಅವರಿಗೆ ಸಾಥ್ ನೀಡಿದರು. ರೋಡ್ ಶೋ ನಲ್ಲಿ ಮೋದಿ ಕಂಡು ಹರ್ಷೋಧ್ಘಾರ ವ್ಯಕ್ತಪಡಿಸಿದರು. ಫೈಜಾಬಾದ್ನ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಮತ್ತು ನೆರೆಯ ಜಿಲ್ಲೆಗಳಿಂದ ಸ್ಪರ್ಧಿಸುತ್ತಿರುವವರಿಗೆ ರೋಡ್ ಶೋ ಮೂಲಕ ಮೋದಿ ಬೆಂಬಲ ಕೋರಿದರು.