ಕೆಲವು ನಿತ್ಯವೂ ಜಾಗಿಂಗ್ ಅಥವಾ ಓಡುವರು. ಆದರೆ ಖಾಲಿ ಹೊಟ್ಟೆಯಲ್ಲಿ ಓಡಿದರೆ ಏನಾಗುವುದು ಎಂದು ಯಾರಿಗೂ ತಿಳಿದಿಲ್ಲ. ಜಾಗಿಂಗ್, ಓಡುವುದು, ಯೋಗ, ವ್ಯಾಯಾಮ ಇತ್ಯಾದಿಗಳನ್ನು ನಿತ್ಯ ಬೆಳಗ್ಗೆ ಮಾಡಿದರೆ ಆಗ ಹಲವಾರು ಬಗೆಯ ಆರೋಗ್ಯ ಲಾಭಗಳು ಸಿಗುವುದು.
ವಾಗಿರಲು ಇದು ಸಹಕಾರಿ ಆಗಿರುವುದು. ದಿನದ ಯಾವ ಸಮಯದಲ್ಲಿ ಓಡಿದರೆ ಅದರಿಂದ ಹೆಚ್ಚು ಲಾಭವಾಗಲಿದೆ ಎನ್ನುವುದನ್ನು ತಿಳಿದು ಓಡಿದರೆ ಒಳ್ಳೆಯದು. ನಿತ್ಯವೂ ಓಡಲು ಸರಿಯಾದ ಸಮಯ ಯಾವುದು ಮತ್ತು ಯಾವುದರಿಂದ ಲಾಭವಾಗಲಿದೆ ಎಂದು ತಿಳಿಯೋಣ.
ಯಾವ ಸಮಯದಲ್ಲಿ ಓಡಬೇಕು ಎಂದು ತಿಳಿದುಕೊಂಡರೆ, ಆಗ ಖಂಡಿತವಾಗಿಯೂ ಅದರಿಂದ ದೇಹಾರೋಗ್ಯಕ್ಕೆ ಹಲವಾರು ಲಾಭಗಳು ಆಗಲಿದೆ. ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಲು ಯಾವ ಸಮಯವು ಸರಿಯಾಗಿದೆ ಎಂದು ತಿಳಿಯಬೇಕು.
ಓಡುವುದರಿಂದ ದೇಹದ ತೂಕ ಇಳಿಸುವುದು ಮಾತ್ರವಲ್ಲದೆ, ಹೃದಯದ ಆರೋಗ್ಯ ವೃದ್ಧಿಸಿ, ಮೆದುಳಿನ ಕಾರ್ಯ ಚಟುವಟಿಕೆಗಳನ್ನು ಕೂಡ ಸುಧಾರಿಸಬಹುದು. ಆದರೆ ಇದೆಲ್ಲವೂ ಯಾವ ಸಮಯದಲ್ಲಿ ಓಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಓಡಿದರೆ, ಆಗ ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಆ ಲಾಭಗಳು ಯಾವುದು ಎಂದು ತಿಳಿಯಲು ತಯಾರಾಗಿ
ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೇಹವು ಸ್ನಾಯುಗಳಿಗಿಂತ ಹೆಚ್ಚಿನ ಕೊಬ್ಬು ಕರಗಿಸುವುದು. ಉಪಾಹಾರದ ಬಳಿಕ ಓಡಲು ಆರಂಭಿಸಿದರೆ ಆಗ ದೇಹವು ಸ್ನಾಯು ಮತ್ತು ಯಕೃತ್ ನಲ್ಲಿ ಇರುವ ಕಾರ್ಬೋಹೈಡ್ರೇಟ್ಸ್ ನ್ನು ಬಳಕೆ ಮಾಡಿಕೊಳ್ಳುವುದು.
ದೇಹವು ಇದನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳುವುದು. ಅದಾಗ್ಯೂ, ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೇಹವು ಬೇರೆ ಶಕ್ತಿಯ ಮೂಲಕ್ಕಾಗಿ ಹುಡುಕುವುದು. ಇದರಿಂದ ದೇಹದ ಕೊಬ್ಬನ್ನು ಅದು ಕರಗಿಸುವುದು.
ಉಪಾಹಾರ ಮಾಡದೆ ಇದ್ದರೆ ಆಗ ದೇಹಕ್ಕೆ ತೀವ್ರತೆಯು ಸಿಗದೆ ಇರುವು ದನ್ನು ನೀವು ಗಮನಿಸಬಹುದು. ಆದರೆ ಇದರಿಂದ ಲಾಭಗಳು ಇದೆ ಎಂದು ತಜ್ಞರು ಹೇಳುವರು. ಕಡಿಮೆ ತೀವ್ರತೆಯೊಂದಿಗೆ ಓಡಿದಾಗ ಅಥವಾ ಜಾಗಿಂಗ್ ಮಾಡಿದರೆ ಆಗ ದೇಹವು ಕಾರ್ಬೋಹೈಡ್ರೇಟ್ಸ್ ಬದಲಿಗೆ ಕೊಬ್ಬನ್ನು ಶಕ್ತಿಯ ಮೂಲವಾಗಿ ತೆಗೆದುಕೊಳ್ಳುವುದು. ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೇಹದಲ್ಲಿನ ಕೊಬ್ಬು ಕರಗುವ ಕಾರಣದಿಂದಾಗಿ ತೂಕ ಇಳಿಸಲು ಇದು ತುಂಬಾ ಸಹಕಾರಿ ಆಗಿರುವುದು. ಓಡುವಂತಹ ಏರೋಬಿಕ್ಸ್ ವ್ಯಾಯಾಮವು ತೂಕ ಇಳಿಕೆಗೆ ಸಹಕಾರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೈಹಿಕ ಫಿಟ್ನೆಸ್ ಸುಧಾರಣೆ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಉಪಾಹಾರ ಮಾಡದೆ ಓಡಿದಾಗ ದೇಹದಲ್ಲಿ ಆಮ್ಲಜನಕದ ಪೂರೈಕೆಯು ಸುಧಾರಣೆ ಆಗುವುದು.
ಖಾಲಿ ಹೊಟ್ಟೆಯಲ್ಲಿ ಓಡಿದರೆ ಅದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡ ಇದೆ. ಆ ಅಡ್ಡಪರಿಣಾಮಗಳು ಯಾವುದು ಎಂದು ತಿಳಿದುಕೊಂಡರೆ ಒಳ್ಳೆಯದು.
ಗಾಯದ ಅಪಾಯಮಾಂಸಖಂಡ ಕಳೆದುಕೊಳ್ಳುವುದು
ನೀವಾಗಿಯೇ ಯಾವುದೇ ವ್ಯಾಯಾಮವನ್ನು ನಿರ್ಧರಿಸಲು ಹೋಗಬೇಡಿ. ಇದರ ಬದಲಿಗೆ ಯಾವುದೇ ತರಬೇತುದಾರರು ಅಥವಾ ತಜ್ಞರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯಿರಿ. ಇದರಿಂದ ದೇಹವು ಯಾವುದೇ ರೀತಿಯ ಅಪಾಯಕ್ಕೆ ಒಳಗಾಗುವುದು ತಪ್ಪುವುದು ಎನ್ನಲಾಗಿದೆ.