ಕೆಲವು ಪಾನೀಯಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದೆಂದು ನಾವು ಭಾವಿಸಿದ್ದರೂ ಅದು ಹೃದಯದ ಆರೋಗ್ಯಕ್ಕೆ ಹಾನಿ ಉಂಟು ಮಾಡಲಿದೆ
ಇಂದಿನ ಒತ್ತಡದ ಜೀವನದಲ್ಲಿ ಹೃದಯದ ಆರೋಗ್ಯ ಕಾಪಾಡುವುದು ಅತೀ ಅಗತ್ಯಅನಾರೋಗ್ಯಕರ ಆಹಾರ ಕ್ರಮ ಮತ್ತು ವ್ಯಾಯಾಮವಿಲ್ಲದೆ ಇರುವ ಕಾರಣದಿಂದಾಗಿ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದರೆ ನಾವು ಸೇವಿಸುವ ಆಹಾರ ಮಾತ್ರವಲ್ಲದೆ, ಕೆಲವೊಂದು ಪಾನೀಯಗಳು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಬೇಸಿಗೆಯಲ್ಲಿ ನಾವು ಹೋಗಿ ತಂಪಾದ ಪಾನೀಯ ತೆಗೆದು ಕೊಂಡು ಕುಡಿಯುತ್ತೇವೆ. ಆದರೆ ಇದು ಹೃದಯದ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.
ಸಕ್ಕರೆಯು ಅತ್ಯಧಿಕ ಮಟ್ಟದಲ್ಲಿ ಇರುವ ಪಾನೀಯಗಳಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ಕೆಲವು ಪಾನೀಯಗಳು ಆರೋಗ್ಯಕಾರಿ ಎಂದು ಅನಿಸಬಹುದಾದರೂ ಹಾಗಿಲ್ಲ. ಹೃದಯಕ್ಕೆ ತುಂಬಾ ಕೆಟ್ಟ ದಾಗಿರುವ ಕೆಲವು ಪಾನೀಯಗಳು.
ಹಣ್ಣಿನ ಜ್ಯೂಸ್ ತುಂಬಾ ಆರೋಗ್ಯಕಾರಿ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಇದರಿಂದ ಒಂದು ಗ್ಲಾಸ್ ಹಣ್ಣಿನ ಜ್ಯೂಸ್ ನ್ನು ಕುಡಿದರೆ ವಿಟಮಿನ್ ಗಳು ಖನಿಜಾಂಶಗಳು ದೇಹಕ್ಕೆ ಸಿಗುವುದು ಎಂದು ಭಾವಿಸಿದ್ದೇವೆ. ವಿಶೇಷವಾಗಿ ಈಗಾಗಲೇ ಹೃದಯದ ಸಮಸ್ಯೆ ಇರುವವರು ಹಣ್ಣಿನ ಜ್ಯೂಸ್ ನಿಂದ ದೂರವಿದ್ದರೆ ಒಳ್ಳೆಯದುಆದರೆ ಇದರ ವಿಚಾರ ಬೇರೆಯೇ ಇದೆ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಸಕ್ಕರೆಯು ಸೇರಿಕೊಳ್ಳುವುದು. ಹಣ್ಣಿನ ಜ್ಯೂಸ್ ನಲ್ಲಿ ನಾರಿನಾಂಶವು ಕಡಿಮೆ ಇದೆ, ಅಧಿಕ ಕ್ಯಾಲೋರಿ ಮತ್ತು ಸಕ್ಕರೆಯು ಇದೆ.
ಒಂದು ಗ್ಲಾಸ್ ಕಿತ್ತಳೆ ಜ್ಯೂಸ್ ನ್ನು ಸೇವಿಸುದು ಹೊಟ್ಟೆಗೆ ಹಿತವೆನಿಸ ಬಹುದು. ಆದರೆ ಇದರಿಂದ ಹೃದಯದ ಆರೋಗ್ಯ ಕೆಡಬಹುದು. ಈ ಜ್ಯೂಸ್ ನಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವು ಹಠಾತ್ ಆಗಿ ಏರಿಕೆಯಾಗುವುದು.
ಇದು ಪುರುಷರು ಹಾಗೂ ಮಹಿಳೆಯರಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುವುದು ಎಂದು ಅಧ್ಯಯನಗಳು ಹೇಳಿವೆ. ಯಾವುದಕ್ಕೂ ಒಮ್ಮೆ ಹಣ್ಣುಗಳ ಜ್ಯೂಸ್ ಕುಡಿಯುವ ಮುನ್ನ ನಿಮ್ಮ ವೈದ್ಯರ ಬಳಿ ಚರ್ಚಿಸಿ, ಹೃದಯದ ಆರೋಗ್ಯಕ್ಕೆ ಯಾವೆಲ್ಲಾ ಬಗೆಯ ಹಣ್ಣುಗಳ ಜ್ಯೂಸ್ ಒಳ್ಳೆಯದು ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ
ಅಧಿಕ ಸಕ್ಕರೆ ಹೊಂದಿರುವ ತಂಪು ಪಾನೀಯಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ಬಾಟಲಿ ತಂಪು ಪಾನೀಯ ದಲ್ಲಿ ನಮ್ಮ ದಿನದ ಅಗತ್ಯಕ್ಕೆ ಬೇಕಿರುವುದಕ್ಕಿಂತಲೂ ಹೆಚ್ಚು ಸಕ್ಕರೆಯು ಇರುವುದು.
ಅತೀ ಹೆಚ್ಚು ತಂಪು ಪಾನೀಯ ಸೇವನೆ ಮಾಡುವವರಲ್ಲಿ ಭವಿಷ್ಯ ದಲ್ಲಿ ಹೃದಯಾಘಾತದ ಅಪಾಯವು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.
ಈಗಾಗಲೇ ಹೃದಯದ ಸಮಸ್ಯೆಯು ಇರುವವರು ತಂಪು ಪಾನೀಯ ಸೇವನೆ ಮಾಡಲೇಬಾರದು. ಇದು ಹೃದಯದ ಕಾಯಿಲೆ ಇರುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚಿಸಬಹುದು.
ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆಗ ಇದು ಹೃದಯದ ಕಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು.
ಮಿತಿಗಿಂತ ಹೆಚ್ಚಾದರೆ ಆಲ್ಕೋಹಾಲ್ ಸಮಸ್ಯೆ ಉಂಟು ಮಾಡುವುದು. ಹೃದಯರೋಗಿಗಳಿಗೆ ಅತಿಯಾದ ಆಲ್ಕೋಹಾಲ್ ಹಾನಿ ಉಂಟು ಮಾಡಬಹುದು. ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಸಮಸ್ಯೆಯು ಬರಬಹುದು. ಕೆಂಪು ವೈನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದಾದರೂ ಬೇರೆ ರೀತಿಯ ಆಲ್ಕೋಹಾಲ್ ಹಾನಿ ಉಂಟು ಮಾಡಬಹುದುಕ್ರೀಡಾಪಟುಗಳಿಗೆ ಈ ಪಾನೀಯಗಳು ಆರೋಗ್ಯಕಾರಿ ಮತ್ತು ಅಗತ್ಯವಾಗಿರಬಹುದು. ಆದರೆ ಇದರಲ್ಲಿ ಅಧಿಕ ಮಟ್ಟದ ಕೆಫಿನ್ ಮತ್ತು ಸಕ್ಕರೆಯು ಇರುವ ಕಾರಣದಿಂದಾಗಿ ಹೃದಯಕ್ಕೆ ಹಾನಿ ಮಾಡುವುದು. ಮಿತ ಪ್ರಮಾಣದಲ್ಲಿ ಕೆಫಿನ್ ಸೇವನೆ ಆರೋಗ್ಯಕಾರಿ.
ಆದರೆ ಶಕ್ತಿ ಪೇಯಗಳಲ್ಲಿ ಕೆಫಿನ್ ಮಟ್ಟವು ಅತ್ಯಧಿಕ ಮಟ್ಟದಲ್ಲಿ ಇದ್ದು, ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯದ ಸಮಸ್ಯೆ ಇರುವವರಿಗೆ ಈ ಪಾನೀಯಗಳು ಮತ್ತಷ್ಟು ಹಾನಿ ಉಂಟು ಮಾಡುವುದು. ಮಿತ ಪ್ರಮಾಣಕ್ಕಿಂತ ಹೆಚ್ಚು ಕೆಫಿನ್ ಸೇವನೆ ಮಾಡಿದರೆ, ಆಗ ಅದರಿಂದ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ವಯಸ್ಸಾದವರಲ್ಲಿ ಇದು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚು ಮಾಡುವುದು.