ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಇರುವಾಗ ಆರ್ಸಿಬಿ ತಂಡಕ್ಕೆ ಆಘಾತಕಾರಿ ಸುದ್ದಿ ಸಿಕ್ಕಿದೆ. ತಂಡದ ಪ್ರಮುಖ ಆಲ್ರೌಂಡರ್ ಗಾಯಗೊಂಡಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಇಂಗ್ಲೆಂಡ್ನ ಸ್ಫೋಟಕ ಆಲ್ರೌಂಡರ್ ವಿಲ್ ಜ್ಯಾಕ್ಸ್ ಗಾಯಗೊಂಡಿದ್ದು ಸದ್ಯ ತಂಡಕ್ಕೆ ಹಿನ್ನಡೆಯಾಗಿದೆ.
ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದ ಇಂಗ್ಲೆಂಡ್ನ ಆಟಗಾರ ಎಡ ತೊಡೆಯ ನೋವಿನಿಂದ ನರಳುತ್ತಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಅವರು ಇಂಗ್ಲೆಂಡ್ ಚಿಕಿತ್ಸೆಗಾಗಿ ಮರಳುತ್ತಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ತಪಾಸಣೆಯ ನಂತರವಷ್ಟೇ ವಿಲ್ ಜ್ಯಾಕ್ಸ್ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದ್ದು, ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು ಎನ್ನುವುದು ತಿಳಿಯಲಿದೆ. ಹೆಚ್ಚಿನ ತೊಂದರೆ ಇಲ್ಲದಿದ್ದರೆ ಅವರು ಕೆಲದಿನಗಳ ವಿಶ್ರಾಂತಿ ಬಳಿಕ ಐಪಿಎಲ್ ಆರಂಭಕ್ಕೆ ಮುನ್ನವೇ ಆರ್ ಸಿಬಿ ಸೇರಿಕೊಳ್ಳುವ ಅವಕಾಶವಿದೆ.
ಗಾಯದ ಪ್ರಮಾಣ ಗಂಭೀರವಾಗಿದ್ದರೆ ಐಪಿಎಲ್ನ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ವಿಲ್ ಜ್ಯಾಕ್ಸ್ರನ್ನು ಆರ್ ಸಿಬಿ 3.2 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ಮ್ಯಾಕ್ಸ್ವೆಲ್ಗೆ ಬ್ಯಾಕ್ಅಪ್ ಆಟಗಾರ ಎಂದೇ ಪರಿಗಣಿಸಲಾಗಿತ್ತು, ಆದರೆ ಜ್ಯಾಕ್ಸ್ ಗಾಯ ತಂಡವನ್ನು ಚಿಂತೆಗೀಡು ಮಾಡಿದೆ.
ಅತ್ಯುತ್ತಮಫಾರ್ಮ್ನಲ್ಲಿದ್ದವಿಲ್ಜ್ಯಾಕ್ಸ್
ವಿಲ್ ಜ್ಯಾಕ್ಸ್ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಇಂಗ್ಲೆಂಡ್ ತಂಡದಲ್ಲಿ ಎಲ್ಲಾ ಮೂರು ಮಾದರಿಯಲ್ಲಿ ಅವರು ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಜ್ಯಾಕ್ಸ್ ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅವರು ಅವಕಾಶ ಪಡೆದುಕೊಂಡಿದ್ದರು.
ನಂತರ ಪಾಕಿಸ್ತಾನಕ್ಕೆ ಇಂಗ್ಲೆಂಡ್ ಟೆಸ್ಟ್ ಸರಣಿಗೆ ತೆರಳುವ ಮುನ್ನ ಯುಎಇಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ವಿಲ್ ಜ್ಯಾಕ್ಸ್ ಭಾಗವಹಿಸಿದ್ದರು. ರಾವಲ್ಪಿಂಡಿಯಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದರು. ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎಸ್ಎ 20 ಲೀಗ್ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವಾಗಿ ಆಡಿದ್ದರು.
ಎಸ್ಎ20 ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜ್ಯಾಕ್ಸ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ಗಳನ್ನು ಆಡಿದ್ದರು. ಲೀಗ್ನ ಮಧ್ಯದಲ್ಲಿಯೇ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಪ್ರಯಾಣ ಮಾಡಿದ್ದರು. ವೆಲ್ಲಿಂಗ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ನಿಂದ
ಹೊರಗುಳಿದ ನಂತರ ಏಕದಿನ ಸರಣಿಯಲ್ಲಿ ಆಡಲು ಢಾಕಾಗೆ ಪ್ರಯಾಣಿಸಿದ್ದರು.
ಗಾಯಗೊಂಡಿರುವಪ್ರಮುಖಆಟಗಾರರು
ಆರ್ ಸಿಬಿ ಪಾಳಯದಲ್ಲಿ ಮೂವರು ಪ್ರಮುಖ ಆಟಗಾರರು ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಂಡದ ಸ್ಫೋಟಕ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಾಯಕ್ಕೆ ತುತ್ತಾಗಿದ್ದರು. ಅವರು ಚೇತರಿಸಿಕೊಂಡಿದ್ದು ಭಾರತದ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಏಕದಿನ ಸರಣಿಯಲ್ಲಿ ಫಿಟ್ ಆಗಿದ್ದರೆ ಐಪಿಎಲ್ನ ಮೊದಲನೇ ಪಂದ್ಯದಿಂದಲೇ ಕಣಕ್ಕಿಳಿಯಲಿದ್ದಾರೆ.
ತಂಡದ ಮತ್ತೊಬ್ಬ ಪ್ರಮುಖ ಆಟಗಾರ, ವೇಗಿ ಜೋಶ್ ಹೇಜಲ್ವುಡ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಯ್ಕೆಯಾಗಿದ್ದ ಅವರು ಗಾಯದ ಸಮಸ್ಯೆಯಿಂದ ಒಂದೂ ಪಂದ್ಯವನ್ನು ಆಡದೆ ಹೊರಗುಳಿಯಬೇಕಾಯಿತು. ಹೇಜಲ್ವುಡ್ ಗಾಯ ಗಂಭೀರವಾದುದಲ್ಲ ಎನ್ನಲಾಗಿದ್ದು ಅವರು ಕೂಡ ಐಪಿಎಲ್ ವೇಳೆಗೆ ಫಿಟ್ ಆಗುವ ಸಾಧ್ಯತೆ ಇದೆ.