ಫೇಮಸ್ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024ರ ಶೋ ಮೇ 06ರಂದು ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ನಡೆದಿದ್ದು ನಟಿ ಆಲಿಯಾ ಭಟ್ ಸೀರೆಯುಟ್ಟು ಹೆಜ್ಜೆ ಹಾಕಿದ್ದಾರೆ.
ಮೆಟ್ ಗಾಲಾ ಕೆಂಪು ಹಾಸಿನ ಮೇಲೆ ನಟಿ ಆಲಿಯಾ ಭಟ್ ಸಬ್ಯಸಾಚಿ ಸೀರೆ ಡಿಸೈನ್ ಮಾಡಿದ ಸೀರೆಯುಟ್ಟು ಗಮನ ಸೆಳೆದಿದ್ದಾರೆ. ಸದ್ಯ ನಟಿಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಆಲಿಯಾ ಭಟ್ ಅವರಿಗೆ ಮೆಟ್ ಗಾಲಾ ಹೊಸ ಅನುಭವವೇನಲ್ಲ. ಪ್ರತಿಷ್ಠಿತ ಸಮಾರಂಭದಲ್ಲಿ ಸತತವಾಗಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದು, 2023ರಲ್ಲಿ ಮೊದಲ ಭಾರಿಗೆ ಪ್ರವೇಶ ಮಾಡಿದ್ದರು.
“ಈವೆಂಟ್ನಲ್ಲಿ ಎರಡನೇ ಬಾರಿ ಭಾಗಿಯಾಗಿದ್ದೇನೆ. ಆದರೆ ನಾನು ಮೊದಲ ಬಾರಿಗೆ ಸೀರೆ ಧರಿಸಿದ್ದೇನೆ. ನಾನು ‘ಗಾರ್ಡನ್ ಆಫ್ ಟೈಮ್’ ಡ್ರೆಸ್ ಕೋಡ್ ಅನ್ನು ಪರಿಗಣಿದ್ದೇನೆ. ಇದು ಟೈಮ್ಲೆಸ್ ಎಂದು ನಾನು ಭಾವಿಸಿದ್ದೇನೆ. ಸೀರೆಗಿಂತ ಹೆಚ್ಚು ಕಾಲಾತೀತ ಸೌಂದರ್ಯ ಮತ್ತೊಂದಿಲ್ಲ” ಎಂದು ಆಲಿಯಾ ಭಟ್ ಹೇಳಿದ್ದಾರೆ.
ಮೆಟ್ ಗಾಲಾ ನೋಟ ವೈರಲ್ ಆಗೋ ಮುನ್ನ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಶೇರ್ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಕುತೂಹಲಕಾರಿ ಫೋಟೋ ಹಂಚಿಕೊಂಡ ನಟಿ “ಮೆಟ್ ಸೆಟ್ ಗೋ” ಎಂದು ಬರೆದುಕೊಂಡಿದ್ದರು.
ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದ ಬಗ್ಗೆ ನಟಿಗೆ ಮೆಚ್ಚುಗೆ ವ್ಯಕ್ತವಾದವು. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಹಂಚಿಕೊಂಡ ಕೆಲವೇ ಕೆಲ ಗಂಟೆಗಳ ಅಂತರದಲ್ಲಿ ಆಲಿಯಾ ಐದು ಸರಣಿ ಕಲರ್ಫುಲ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ 2023ರಲ್ಲಿ ಮೆಟ್ ಗಾಲಾ ಪ್ರವೇಶಿಸಿದರು. ಕಳೆದ ವರ್ಷ ಪ್ರಬಲ್ ಗುರುಂಗ್ ಡಿಸೈನ್ ಮಾಡಿದ್ದ ಉಡುಗೆ ಧರಿಸಿ ಮನಮೋಹಕ ನೋಟ ಬೀರಿದ್ದರು. ಸಣ್ಣ ಮುತ್ತುಗಳಿಂದ ಅಲಂಕರಿಸಲ್ಪಟ್ಟ ದೊಡ್ಡ ಬಿಳಿ ಗೌನ್ನಲ್ಲಿ ತಮ್ಮ ಸೊಬಗು ಬೀರಿದ್ದು, ಎಲ್ಲೆಡೆ ಪ್ರಶಂಸೆಗೆ ಪಾತ್ರರಾದರು.