ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಟಿ ಸ್ಪರ್ಧಿಸುತ್ತಿದ್ದಾರೆ. ನಿತ್ಯ ಕಂಗನಾರ ಒಂದಲ್ಲ ಒಂದು ಹೇಳಿಕೆಗಳು ಸುದ್ದಿಯಾಗುತ್ತಲೆ ಇದೆ. ಇದೀಗ ‘ಇಂಡಸ್ಟ್ರಿಯಲ್ಲಿ ಅಮಿತಾಭ್ ಬಳಿಕ ಅತಿ ಹೆಚ್ಚು ಗೌರವಿಸಲ್ಪಟ್ಟ ನಟಿ ನಾನು ಎಂದು ಕಂಗನಾ ಹೇಳಿದ್ದು ಸದ್ಯ ಈಕೆಯ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
‘ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಅಥವಾ ಮಣಿಪುರಕ್ಕೆ ಹೋದಾಗ ಇಡೀ ದೇಶವೇ ಅಚ್ಚರಿ ವ್ಯಕ್ತಪಡಿಸುತ್ತದೆ. ನನಗೆ ಸಾಕಷ್ಟು ಪ್ರೀತಿ ಹಾಗೂ ಗೌರವ ಇದೆ ಎಂದು ಖುಷಿ ಆಗುತ್ತದೆ. ಅಮಿತಾಭ್ ಬಚ್ಚನ್ ಬಳಿಕ ಇಂಡಸ್ಟ್ರಿಯಲ್ಲಿ ಯಾರಿಗಾದರೂ ಸಾಕಷ್ಟು ಪ್ರೀತಿ, ಗೌರವ ಸಿಕ್ಕಿದೆ ಎಂದರೆ ಅದು ನನಗೆ ಮಾತ್ರ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಕಂಗನಾ ಅವರನ್ನು ಟ್ರೋಲ್ ಮಾಡುವ ಕೆಲಸ ಆಗುತ್ತಿದೆ. ‘ಕಂಗನಾ ಅವರ ಸೂಪರ್ ಹಿಟ್ ಸಿನಿಮಾ ಬಂದಿದ್ದು 2015ರಲ್ಲಿ. 9 ವರ್ಷಗಳಲ್ಲಿ 15 ಫ್ಲಾಪ್ ಸಿನಿಮಾ ನೀಡಿದ್ದಾರೆ. ಅವರು ಅಮಿತಾಭ್ ಬಚ್ಚನ್ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಇದೆಂಥ ವಿಚಿತ್ರ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ‘ಕಂಗನಾಗೆ ತಮ್ಮ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇದೆ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಕಂಗನಾ ತಮ್ಮ ಸಿನಿ ಕೆರಿಯರ್ ಬಗ್ಗೆ ದೊಡ್ಡ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ ತೊರೆಯುತ್ತೇನೆ ಎಂದು ಕಂಗನಾ ಹೇಳಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ಫುಲ್ ಟೈಮ್ ರಾಜಕಾರಣಿಯಾಗಿ ಜನರ ಸೇವೆ ಮಾಡೋದಾಗಿ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಕಂಗನಾಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀವು ಸಿನಿಮಾ ಮತ್ತು ರಾಜಕೀಯವನ್ನು ಹೇಗೆ ನಿರ್ವಹಿಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಿದ್ರು. ಇದಕ್ಕೆ ಉತ್ತರಿಸಿದ ಕಂಗನಾ, “ನನಗೆ ಸಿನಿಮಾದಲ್ಲಿ ನಟಿಸುತ್ತಾ ಬೋರ್ ಅನಿಸುತ್ತೆ. ಆದಕ್ಕೆ ನಾನು ನಟಿಸುತ್ತಾ, ನಿರ್ದೇಶನ ಕೂಡ ಮಾಡುತ್ತೇನೆ ಎಂದಿದ್ದಾರೆ. ಜನರಿಗೆ ನನ್ನ ಅವಶ್ಯಕತೆ ಇದೆ ಎಂದು ನನಗೆ ಅನಿಸಿದರೆ, ನಾನು ಆ ದಿಕ್ಕಿನಲ್ಲಿ ಹೋಗುತ್ತೇನೆ, ನಾನು ಮಂಡಿಯಲ್ಲಿ ಗೆದ್ದರೆ, ನಾನು ನಿಷ್ಠೆಯಿಂದ ಫುಲ್ ಟೈಮ್ ರಾಜಕರಣದಲ್ಲಿ ಕೆಲಸ ಮಾಡುತ್ತೇನೆ ಎಂದು ಕಂಗನಾ ಹೇಳಿದ್ದಾರೆ.