ಕೇಪ್ ಕೆನವೆರಾಲ್ ನಿಂದ ಅಂತರಿಕ್ಷ ಯಾನ ಕೈಗೊಳ್ಳಬೇಕಿದ್ದ ತನ್ನ ಪ್ರಥಮ ಗಗನಯಾನಿ ಸಹಿತ ವ್ಯೋಮ ನೌಕೆಯ ಉಡಾವಣೆಯನ್ನು ರಾಕೇಟ್ನಲ್ಲಿನ ವಾಲ್ವ್ ವೊಂದರಲ್ಲಿ ದೋಷ ಕಂಡು ಬಂದ ಕಾರಣ ಬೋಯಿಂಗ್ ಸಂಸ್ಥೆ ಮುಂದೂಡಿಕೆಮಾಡಲಾಗಿದೆ.
ಬೋಯಿಂಗ್ನ ಸ್ಟಾರ್ ಲೈನರ್ನ ಕ್ಯಾಪ್ಸೂಲ್ ಒಳಗೆ ನಾಸಾದ ಇಬ್ಬರು ಟೆಸ್ಟ್ ಪೈಲಟ್ಗಳು ಆಗ ತಾನೆ ಪ್ರವೇಶಿಸಿದ್ದರು. ಆದರೆ ಉಡಾವಣೆಗೆ ನಿಗದಿತ ಎರಡು ಗಂಟೆಗಳ ಮುನ್ನ ಕ್ಷಣಗಣನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಯುನೈಟೆಡ್ ಲಾಂಚ್ ಅಲಯೆನ್ಸ್ ಎಂಜಿನಿಯರ್ ಡಿಲ್ಲೋನ್ ರೈಸ್ ತಿಳಿಸಿದರು.
ಕಂಪನಿಯ ಅಟ್ಲಾಸ್ ರಾಕೆಟ್ನಲ್ಲಿನ ಮೇಲು ಹಂತದಲ್ಲಿ ಆಮ್ಲಜನಕ ಪರಿಹಾರ ವಾಲ್ವ್ ನಲ್ಲಿ ಸಮಸ್ಯೆ ಕಂಡು ಬಂದಿತು ಎಂದು ರೈಸ್ ಹೇಳಿದರು.ಒಂದು ವಾರ ಅವಧಿಯ ವಾಸ್ತವ್ಯಕ್ಕಾಗಿ ಇಬ್ಬರು ಟೆಸ್ಟ್ ಪೈಲಟ್ಗಳನ್ನು ಈ ತಂಡವು ಯಾವಾಗ ಮತ್ತೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಯತ್ನಿಸಲಿದೆ ಎಂಬ ಬಗ್ಗೆ ತತ್ಕ್ಷಣದ ಮಾಹಿತಿ ಇಲ್ಲ.
ಇದು ಬೋಯಿಂಗ್ನ ಪ್ರಥಮ ಸಿಬ್ಬಂದಿ ಸಹಿತ ವ್ಯೋಮನೌಕೆಯ ತಾಂತ್ರಿಕ ದೋಷದ ಕಾರಣ ಗಗನಯಾನದ ಇತ್ತೀಚಿನ ವಿಳಂಬವಾಗಿದೆ.ಸ್ಟಾರ್ಲೈನರ್ನ ಮಾನವ ರಹಿತ ಗಗನಯಾನ ವಿಫಲವಾಗಿತ್ತು. ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಥಮ ಬಾರಿಗೆ 2019ರಲ್ಲಿ ನೌಕೆಯನ್ನು ತಲುಪಿಸಲು ಬೋಯಿಂಗ್ ಮರು ಯತ್ನ ಮಾಡಬೇಕಾಯಿತು. ಆಗ ಕಂಪನಿ ಚ್ಯೂಟ್ಸಮಸ್ಯೆ ಮತ್ತು ಹೊತ್ತಿ ಉರಿಯುವ ಟೇಪ್ ಸಮಸ್ಯೆಯನ್ನು ಎದುರಿಸಿತ್ತು.
ಈ ಬಾರಿಯೂ ತಾಂತ್ರಿಕ ದೋಷ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಬೋಯಿಂಗ್ನ ನೂತನ ಆಸ್ಟ್ರೋವ್ಯಾನ್ ಗಗನಯಾನಿಗಳಾದ ಬುಚ್ ವಿಲೋರ್ ಮತ್ತು ಸುನೀತಾ ವಿಲಿಯಮ್ಸೌ ಅವರನ್ನು ವಾಯು ನೆಲೆಯ ಉಡಾವಣಾ ವೇದಿಕೆಯಿಂದ ವಾಪಸ್ ಕರೆದೊಯ್ದಿತು.
ನಾಸಾ ದಶಕದ ಹಿಂದೆ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನಿಗಳನ್ನು ಕರೆದೊಯ್ಯಲು ಮತ್ತು ಅಲ್ಲಿಂದ ಕರೆತರಲು ಬೋಯಿಂಗ್ ಮತ್ತು ಸ್ಪೇಸ್-ಎಕ್ಸ್ ಕಂಪನಿಗಳ ನಡುವೆ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ.