ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರು ಟಿಕೆಟ್ (Election Ticket) ಕುರಿತು ಕೊಟ್ಟ ಸುಳಿವಿನಿಂದ ಆಕಾಂಕ್ಷಿಗಳಿಗೆ ಶಾಕ್ ಆಗಿದೆ. ನಾಲ್ಕೈದು ಶಾಸಕರಿಗೆ ಟಿಕೆಟ್ ಇಲ್ಲ ಎಂದು ಬಿಎಸ್ವೈ ಹೇಳಿದ್ದು, ಇದೀಗ ಬಿಜೆಪಿಯ ಆ ಟಿಕೆಟ್ ವಂಚಿತರು ಯಾರು ಎಂಬ ಪ್ರಶ್ನೆ ಕಾಡಿದೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ (BJP) ಪಕ್ಷಕ್ಕೆ ಯಾರು ಬರುತ್ತಾರೆ ಅವರಿಗೆ ಸ್ವಾಗತ. ಯಾರು ಪಕ್ಷ ಬಿಟ್ಟು ಹೋಗ್ತಾರೆ ಅವರು ಬಿಟ್ಟು ಹೋಗಬಹುದು. ನಾಲ್ಕೈದು ಹಾಲಿ ಶಾಸಕ (MLA Ticket) ರನ್ನು ಬಿಟ್ಟು ಉಳಿದ ಎಲ್ಲಾ ಬಿಜೆಪಿ ಶಾಸಕರಿಗೆ ಟಿಕೆಟ್ ಕೊಡಲಾಗುವುದು. ಆದಷ್ಟು ಬೇಗ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ 41 ರಲ್ಲಿ 30 ಸ್ಥಾನ ನಾವು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ (Congress) ನಾಯಕರು ಟೀಕೆ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದರು. ರಮೇಶ್ ಕುಮಾರ್ ನಾವು ಸಾಕಷ್ಟು ಮಾಡಿಕೊಂಡು ತೃಪ್ತಿಯಲ್ಲಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಇದಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯ ಉತ್ತರ ಕೊಡಬೇಕು. ಕಾಂಗ್ರೆಸ್ ಪ್ರಜಾಧ್ವನಿಗೆ ಜನ ಸೇರುತ್ತಿಲ್ಲ ನಮ್ಮ ಯಾತ್ರೆಗೆ ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಪರ ವಾತಾರವರಣವಿದ್ದು 140 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರಿಲ್ಲ ಹೀಗಾಗಿ ಕೇಂದ್ರ ನಾಯಕರನ್ನು ಕರೆಸುವ ಕುರಿತು ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರದ ಕುರಿತು ಮಾತನಾಡಿ, ರಾಹುಲ್ ಗಾಂಧಿ (Rahul Gandhi) ಅವರನ್ನು ಅವರು ಯಾಕೆ ಕರೆಸುತ್ತಿಲ್ಲ? ಅವರು ಬೇಕಾದ್ರೆ ಅವರ ಪಕ್ಷದ ನಾಯಕರನ್ನು ಕರೆಸಲಿ. ಯಾರು ಹೊರ ದೇಶಕ್ಕೆ ಹೋಗಿ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ತಿಳಿಸಿದರು.
BREAKING NEWS: Ramya In Bjp?… ರಮ್ಯಾ ನನ್ನ ನೆಚ್ಚಿನ ನಟಿ ಎಂದ ಸಂಸದ ಪ್ರತಾಪ್ ಸಿಂಹ : ಬಿಜೆಪಿ ಸೇರ್ತಾರಾ ರಮ್ಯಾ?
ದಾವಣಗೆರೆ (Davanagere) ಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ. ನರೇಂದ್ರ ಮೋದಿ (Narendra Modi) ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಸವಕಲ್ಯಾಣ (Basavakalyana) ಇಡೀ ದೇಶ ಗಮನ ಸೇಳೆಯುವ ಸ್ಥಳ ಆಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡುವೆ ಎಂದು ಹೇಳಿದರು.
ಇದೇ ವೇಳೆ 2023ರ ವಿಧಾನಸಭೆಗೆ ವಿಜಯೇಂದ್ರ (Vijayendra) ಸ್ಪರ್ಧೆ ವಿಚಾರದ ಕುರಿತು ಮಾತನಾಡಿ, ಕೇಂದ್ರದ ನಾಯಕರು ಎಲ್ಲಿ ಹೇಳುತ್ತಾರೆ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಶಿಕಾರಿಪುರ ಆಗಬಹುದು ಬೇರೆ ಯಾವುದು ಆಗಬಹುದು, ಶಿಕಾರಿಪುರದಲ್ಲಿ ನಿಲ್ಲಬಹುದು ಅಂತಾ ನನ್ನ ಅನಿಸಿಕೆ ಎಂದರು.