ಇಂದು ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಎಲ್ಲಾ ತಂಡಗಳು 11 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿವೆ. ಆದರೆ ಪ್ಲೇಆಫ್ನ ಚಿತ್ರ ಇನ್ನೂ ಸ್ಪಷ್ಟವಾಗಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಈ ರೇಸ್ನಲ್ಲಿ ಮುನ್ನಡೆಯಲ್ಲಿದೆ.
ಆದರೆ ಉಳಿದ ಎರಡು ಸ್ಥಾನಗಳಿಗಾಗಿ ಕನಿಷ್ಠ 7 ತಂಡಗಳ ನಡುವೆ ಕಠಿಣ ಹೋರಾಟವಿದೆ. ಬುಧವಾರ ಎಸ್ಆರ್ಹೆಚ್-ಎಲ್ಎಸ್ಜಿ ನಡುವೆ ನಡೆದ ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ
ಟೂರ್ನಿಯಿಂದ ಹೊರಬೀಳುವ ಮತ್ತೊಂದು ತಂಡ ಯಾವುದು ಎಂಬುದು ಇಂದು ನಿರ್ಧಾರವಾಗಲಿದೆ. ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಡಿಸಲಾಗಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ಇಂದು ಆರ್ಸಿಬಿ ಮತ್ತು ಪಂಜಾಬ್ ಮುಖಾಮುಖಿ ಆಗಲಿದೆ. ಲಕ್ನೋ ವಿರುದ್ಧ ಹೈದರಾಬಾದ್ ತಂಡ ಗೆಲುವು ಸಾಧಿಸಿದ ಪರಿಣಾಮ ಇಂದಿನ ಪಂದ್ಯ ಉಭಯ ತಂಡಗಳಿಗೂ ನಾಕೌಟ್ ಆಗಿದೆ. ಈ ಪಂದ್ಯದಲ್ಲಿ ಯಾರು ಸೋತರೂ ಟೂರ್ನಿಯಲ್ಲಿ ಅವರ ಪಯಣ ಕೊನೆಗೊಳ್ಳುತ್ತದೆ.