ವಾಷಿಂಗ್ಟನ್: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(ಸ್ಟೆಮ್) ಕ್ಷೇತ್ರದ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಲಭ್ಯವಾಗಿದೆ.
ವಿದ್ಯಾರ್ಥಿಗಳ ವೀಸಾಗೆ ಪ್ರೀಮಿಯಂ ಖಾಯಂ ಸೇವೆ ನೀಡಲು ಅಮೆರಿಕ ಸರಕಾರ ನಿರ್ಧರಿಸಿದೆ. ಅದರಂತೆ ಇನ್ನು ಮುಂದೆ ನಿರ್ದಿಷ್ಟ ವಿಭಾಗದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಅತ್ಯಂತ ತ್ವರಿತವಾಗಿ ಪರಿಶೀಲಿಸುವ ಪ್ರಕ್ರಿಯೆ ನಡೆಯಲಿದೆ.
ಸ್ಟೆಮ್ ಕ್ಷೇತ್ರದಲ್ಲಿ ಬರುವ ಆಪ್ಶನಲ್ ಪ್ರಾಕ್ಟಿಕಲ್ ಟ್ರೈನಿಂಗ್ಗೆ ಅರ್ಜಿ ಸಲ್ಲಿಸುವಂಥ ವಿದ್ಯಾರ್ಥಿಗಳ ಅರ್ಜಿಗಳನ್ನು ಪ್ರೀಮಿಯಂ ಸೇವೆಯ ವ್ಯಾಪ್ತಿಗೆ ತಂದಿದ್ದೇವೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ತಿಳಿಸಿದೆ. ಮಾ.6ರಿಂದಲೇ ಈ ಸೇವೆ ಆರಂಭವಾಗಿದೆ.