ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಆರಾಧನಾ ರಾಮ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.
ದಿನೇ ದಿನೇ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿರುವ ಕಾಟೇರನ ಬೆಡಗಿ ಇದೀಗ ಸಖತ್ ಹಾಟ್ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ನಟಿಯ ಫೋಟೋ ನೋಡಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ದಿವಂಗತ ರಾಮ್ ಹಾಗೂ ನಟಿ ಮಾಲಾಶ್ರೀ ಮಗಳು ಆರಾಧನಾಗೆ ಮೊದಲ ಚಿತ್ರದಲ್ಲಿ ದರ್ಶನ್ ರಂತಹ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿ ಆರಾಧಾನ ಹಳ್ಳಿ ಹುಡುಗಿಯಾಗಿ ನಟಿಸಿದ್ದು, ಇದರಿಂದ ಅಪಾರ ಅಭಿಮಾನಿಗಳನ್ನು ಸಹ ಪಡೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆರಾಧನಾ ಇತ್ತೀಚೆಗೆ ಹೆಸರಾಂತ ಫೋಟೋಗ್ರಾಫರ್ ಡಬ್ಬು ರತ್ನಾನಿ ಅವರಿಂದ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೋಲ್ಡ್ ಆಗಿರುವ ಫೋಟೋಗೆ ಸಾಕಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದಾರೆ.
ಡೀಪ್ ನೆಕ್ ಇರುವಂತಹ ಕಪ್ಪು ಬಣ್ಣದ ಮಿನಿ ಡ್ರೆಸ್, ಅದಕ್ಕೊಪ್ಪುವ ಕಪ್ಪು ಬಣ್ಣದ ನೀ ಲೆಂಗ್ತ್ ಶೂ ಧರಿಸಿರುವ ಆರಾಧನಾ ಕಣ್ಣಲ್ಲೇ ಕೊಲ್ಲುವಂತಹ ಬೋಲ್ಡ್ ಲುಕ್ ನೀಡಿದ್ದಾರೆ. ಈ ಫೋಟೋ ನೋಡಿ ಹೆಚ್ಚಿನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಕನಸಿನ ರಾಣಿ ಮಾಲಾಶ್ರೀಯವರ ಮಗಳಾಗಿ ಈ ಥರ ಬಟ್ಟೆ ಹಾಕಬೇಡಿ. ಕನ್ನಡದ ಮೇಲೆ ತುಂಬಾ ಅಭಿಮಾನ ಇದೆ ಇತರ ಪೋಸ್ಟ್ ಬಿಡಬೇಡಿ ಅಕ್ಕ, ಕೈಮುಗಿದು ಕೇಳುತ್ತೇವೆ ಪೋಸ್ಟ್ ಡಿಲೀಟ್ ಮಾಡಿ ಎಂದು ಅಭಿಮಾನಿಯೊಬ್ಬ ಅಂಗಲಾಚಿದ್ದಾರೆ.
ಮೊದಲನೇ ಸಿನಿಮಾ ಸೂಪರ್ ಹಿಟ್ ಆಗಿದೆ. ಅದರಲ್ಲಿ ನಿಮ್ಮ ಪಾತ್ರ ನೋಡಿ ಅಭಿಮಾನಿಯಾದೆ, ಅಲ್ಲದೇ ನನ್ನ ಫೇವರೇಟ್ ನಟಿ ಮಾಲಾಶ್ರೀ ಮೇಡಂ ಮಗಳು ನೀವು, ಅವರು ಈ ಥರಾ ಎಲ್ಲಾ ಬಟ್ಟೆ ಹಾಕಿಲ್ಲಾ . ನೀವು ಈ ಥರಾ ಫೋಟೊ ಹಾಕಬೇಡಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ.