ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಜಗಳ ಬೀದಿಗೆ ಬಂದು ನಿಂತಿದೆ. ಪತಿಯ ವಿರುದ್ಧ ಆಲಿಯಾ ನಾನಾ ಆರೋಪಗಳನ್ನು ಮಾಡಿದ್ದಾರೆ. ಮೊನ್ನೆಯಷ್ಟೇ ಹೆಂಡತಿಯ ವಿರುದ್ಧ ಹಲವು ಪೋಸ್ಟ್ ಗಳನ್ನು ಹಾಕಿದ್ದ ಸಿದ್ದಿಕಿ ಮೌನ ಮುರಿದಿದ್ದರು. ನವಾಜುದ್ದೀನ್ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ನಟಿ ಕಂಗನಾ ರಣಾವತ್ ಪ್ರಕರಣದಲ್ಲಿ ಎಂಟ್ರಿಕೊಟ್ಟಿದ್ದಾರೆ.
ಮೌನ ಯಾವತ್ತು ನೋವನ್ನುಂಟು ಮಾಡುತ್ತಿದೆ. ಎಲ್ಲವನ್ನೂ ಹಂಚಿಕೊಂಡಿದ್ದೀರಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಕಂಗನಾ ಹೇಳಿದ್ದಾರೆ. ಈ ಮೂಲಕ ನವಾಜುದ್ದೀನ್ ಸಿದ್ದಿಕಿಗೆ ಬೆಂಬಲಕ್ಕೆ ನಿಂತಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಹಾಗೂ ಪತ್ನಿ ಆಲಿಯಾ ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.
ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಸಿದ್ದಿಕಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.