ಪ್ರಧಾನಿ ನರೆಂದ್ರ ಮೋದಿಯವರು ಇಲ್ಲಿನ ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು ಗುರುದ್ವಾರ ಪಾಟ್ನಾ ಸಾಹಿಬ್ಗೆ ಭೇಟಿ ನೀಡಿದರು. ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ವಿಶೇಷ ಪ್ರಸಾದ ತಯಾರಿಸಿ, ಬಡಿಸಿದ್ದಾರೆ.
ನಂತರ ಗುರುದ್ವಾರದಲ್ಲಿ `ಕರಃ ಪ್ರಸಾದ’ವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು. ಇಂದು ಹಾಜಿಪುರ, ಮುಜಾಫರ್ಪುರ ಮತ್ತು ಸರನ್ನಲ್ಲಿ ಎನ್ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ್ಯಾಲಿ ನಡೆಸಿ ಮೋದಿ ಮಾತನಾಡಲಿದ್ದಾರೆ