‘ಮಹಾನಟಿ’ ಕೀರ್ತಿ ಸುರೇಶ್ ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಈಗಾಗ್ಲೆ ವರುಣ್ ಧವನ್ ಗೆ ಜೋಡಿಯಾಗೋ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಇದೀಗ ಮರ್ತೋರ್ವ ಸ್ಟಾರ್ ನಟನಿಗೆ ಜೋಡಿಯಾಗ್ತಿದ್ದಾರೆ.
ವರುಣ್ ಧವನ್ ನಟನೆಯ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ‘ಬೇಬಿ ಜಾನ್’ ಎಂದು ಈ ಸಿನಿಮಾಗೆ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ನಡುವೆ ಅಕ್ಷಯ್ ಕುಮಾರ್ಗೆ ನಾಯಕಿಯಾಗಿ ನಟಿಸುವ ಚಾನ್ಸ್ ಪಡೆದುಕೊಂಡಿದ್ದಾರೆ.
ಸತತ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್ ಇದೀಗ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಜೊತೆ ಕೈಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಬರುವ ಬಗ್ಗೆ ಘೋಷಣೆ ಕೂಡ ಆಗಿದೆ. ಈ ಸಿನಿಮಾದಲ್ಲಿ ನಟಿಸಲು ಹಲವು ನಟಿಮಣಿಯರ ಹೆಸರು ಸದ್ದು ಮಾಡಿತ್ತು. ಕಡೆಯದಾಗಿ ಕೀರ್ತಿ ಸುರೇಶ್ ಸೂಕ್ತ ಎಂದೆನಿಸಿ ನಟಿಗೆ ಸಿನಿಮಾ ಟೀಮ್ ಮಣೆ ಹಾಕಿದೆ.
ಕಾಮಿಡಿ ಕಮ್ ಲವ್ ಸ್ಟೋರಿ ಇರುವ ಸಿನಿಮಾ ಇದಾಗಿದ್ದು, ನಾಯಕನಿಗೆ ಪ್ರಾಮುಖ್ಯತೆ ಇರುವಷ್ಟೇ ಕೀರ್ತಿ ಪಾತ್ರಕ್ಕೂ ವ್ಯಾಲ್ಯೂ ಇದೆಯಂತೆ. ಹಾಗಾಗಿ ನಟಿ ನಟಿಸಲು ಒಪ್ಪಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದ ಬೆನ್ನಲ್ಲೇ ಸೌತ್ ನಟಿಗೆ ಚಿತ್ರತಂಡ ಮಣೆ ಹಾಕಿದೆ.