ಉಕ್ರೇನ್ ಹಾಗೂ ರಷ್ಯಾದ ನಡುವಿನ ಯುದ್ದ ಆರಂಭವಾಗಿ ಸಾಕಷ್ಟು ಸಮಯ ಕಳೆದಿದೆ. ಈ ಯುದ್ಧದಿಂದ ಸಾಕಷ್ಟು ಅಮಾಯಕ ಜೀವಗಳು ಬಲಿಯಾಗಿವೆ. ಇದೀಗ ಉಕ್ರೇನ್ ಸೈನಿಕರು ತಮ್ಮದೇ ಅಧ್ಯಕ್ಷರ ವಿರುದ್ಧ ತಿರುಗಿ ಬಿದಿದ್ದಾರೆ.
ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದಿನಕಳೆದಂತೆ ಉಕ್ರೇನ್ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದ್ದು, ಉಕ್ರೇನ್ ಹಿಡಿತದಲ್ಲಿದ್ದ ಪ್ರದೇಶಗಳನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಉಕ್ರೇನ್ ಸೈನಿಕರೇ ತಮ್ಮ ಅಧ್ಯಕ್ಷ ಝೆಲೆನ್ಸ್ಕಿ ವಿರುದ್ಧ ತಿರುಗಿಬಿದ್ದಿದ್ದು, ರಷ್ಯಾ ವಿರುದ್ಧ ಹೋರಾಟ ಮಾಡಲು ಅಗತ್ಯ ಶಸ್ತ್ರಾಸ್ತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ ಯುದ್ಧದಲ್ಲಿ ರಷ್ಯಾ ಸೈನಿಕರು ಮುನ್ನಡೆಯಲ್ಲಿದ್ದು, ಉಕ್ರೇನ್ನ ದೊಡ್ಡ ಪ್ರಾಂತ್ಯ ಮತ್ತು ರಷ್ಯಾ ಗಡಿಗೆ ಹತ್ತಿರದಲ್ಲೇ ಇರುವ ಖಾರ್ಕೀವ್ ಮೇಲೆ ರಷ್ಯಾ ಸೈನಿಕರು ಬಹುತೇಕ ಹಿಡಿತ ಸಾಧಿಸಿದ್ದಾರೆ. ಕಳೆದ 2 ದಿನದಲ್ಲಿ ಭರ್ಜರಿ 10 ಹಳ್ಳಿ, ಹಾಗೂ ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದಾರೆ.
ಉಕ್ರೇನ್ ಸೈನಿಕರಿಗೆ ಸೂಕ್ತ ಶಸ್ತ್ರಾಸ್ತ್ರಗಳು ಸಿಗದ ಕಾರಣ ಯಾವುದೇ ವಿರೋಧ ಇಲ್ಲದೆ ರಷ್ಯಾ ಈಗ ಖಾರ್ಕೀವ್ ನಗರವನ್ನು ವಶಕ್ಕೆ ಪಡೆಯುತ್ತಿದ್ದು, ಇದು ಉಕ್ರೇನ್ ಜನರ ಚಿಂತೆ ಹೆಚ್ಚಿಸಿದ್ದು ಮಾತ್ರವಲ್ಲದೇ ಸೈನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಝೆಲೆನ್ಸ್ಕಿ ಜಾಗತಿಕ ಸಮುದಾಯಕ್ಕೆ ಉಕ್ರೇನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದೇ ಕಾರಣಕ್ಕೆ ಜಾಗತಿಕ ಸಮುದಾಯದಿಂದ ಉಕ್ರೇನ್ ಗೆ ಸರಿಯಾದ ನೆರವು ಸಿಗುತ್ತಿಲ್ಲ ಎಂದು ಸೈನಿಕರು ಆರೋಪಿಸಿದ್ದಾರೆ.