ಭಾರತದ ವಿರುದ್ಧ ಅಮೆರಿಕ ಮತ್ತೊಮ್ಮೆ ಕಿರಿಕ್ ಶುರು ಮಾಡಿದೆ. ಸಮಯ ಸಿಕ್ಕರೆ ಸಾಕೆಂದು ಕಾಯುತ್ತಾ ಕೂರುವ ಅಮೆರಿಕ ಪದೇ ಪದೇ ಭಾರತದ ವಿರುದ್ಧ ಕುತಂತ್ರ ಮಾಡುತ್ತದೆ ಎಂಬ ಆರೋಪಗಳು ಕೇಳಿಬರುತ್ತವೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಸಣ್ಣ ಮ್ಯಾಟರ್ಗೆ ಭಾರತದ ವಿರುದ್ಧ ಮತ್ತೊಮ್ಮೆ ಕೆಂಡಕಾರಿದೆ.
ಹೀಗೆ ಸಹಿ ಹಾಕಿದ ತಕ್ಷಣ ಅಮೆರಿಕ ರೊಚ್ಚಿಗೆದ್ದಿದೆ. ಭಾರತದ ಹೆಸರು ಪ್ರಸ್ತಾಪ ಮಾಡದೆ, ಇರಾನ್ನ ಜೊತೆಗೆ ವ್ಯಾಪಾರ ಒಪ್ಪಂದ ಮುಂದುವರಿಸಿದರೆ ಆ ದೇಶಕ್ಕೆ ಸಂಭಾವ್ಯ ನಿರ್ಬಂಧಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಅರ್ಥಾತ್ ಸೋ ಕಾಲ್ಡ್ ದೊಡ್ಡಣ್ಣ ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ಆದರೆ ಇದರಿಂದಾಗಿ ಅಮೆರಿಕಗೆ ದೊಡ್ಡ ನಷ್ಟ, ಭಾರತಕ್ಕೆ ಅಲ್ಲ ಅಂತಿದ್ದಾರೆ ತಜ್ಞರು. ಇರಾನ್ ರಹಸ್ಯವಾಗಿ ಅಣ್ವಸ್ತ್ರ ಯೋಜನೆಗಳನ್ನು ನಡೆಸುತ್ತಿದೆ ಎಂದು ದೂರುತ್ತಲೇ ಬಂದಿರುವ ಅಮೆರಿಕ, ಆ ದೇಶದ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಇಂತಹ ಸಂದರ್ಭದಲ್ಲೇ ಇರಾನ್ ಜತೆ ಭಾರತ ಒಪ್ಪಂದ ಮಾಡಿಕೊಂಡಿರುವುದು ಅಮೇರಿಕಾದ ಆಕ್ರೋಶಕ್ಕೆ ಕಾರಣವಾಗಿದೆ.
ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಇರಾನ್ ಹಾಗೂ ಭಾರತ ಒಪ್ಪಂದಕ್ಕೆ ಸಹಿ ಹಾಕಿರುವ ವಿಷಯ ನಮಗೂ ಗೊತ್ತಾಗಿದೆ. ತನ್ನ ವಿದೇಶಾಂಗ ನೀತಿ ಹಾಗೂ ಚಾಬಹಾರ್ ಒಪ್ಪಂದ ಮತ್ತು ಇರಾನ್ ಜತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ಭಾರತವೇ ಮಾತನಾಡಲಿ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತ ಮತ್ತು ಇರಾನ್ ಬಂದರು ಒಪ್ಪಂದ ಅದೆಷ್ಟು ಉಪಯೋಗಕಾರಿ ಅಂತಾ ಹೇಳಿದರೆ, ಇದರಿಂದ ಇರಾನ್ ಜೊತೆಗೆ ಮಾತ್ರವಲ್ಲ ಆಫ್ಘಾನಿಸ್ತಾನದ ಜೊತೆಗೂ ಬಾಂಧವ್ಯ ವೃದ್ಧಿಗಾಗಿ ಸಹಕಾರಿ ಆಗುತ್ತಿದೆ. ಚಬಹಾರ್ ಬಂದರು ಮೂಲಕ ಭಾರತವು ಈವರೆಗೂ 2.5 ಮಿಲಿಯನ್ ಟನ್ ಗೋಧಿ ಸೇರಿದಂತೆ 2,000 ಟನ್ ಬೇಳೆಕಾಳುಗಳನ್ನು ಆಫ್ಘಾನಿಸ್ತಾನಕ್ಕೆ ರವಾನಿಸಲಾಗಿದೆ.ಈ ಮೂಲಕ ಇರಾನ್ & ಅಫ್ಘಾನ್ ನಡುವಿನ ಸಂಬಂಧ ವೃದ್ಧಿಗೂ ಭಾರತಕ್ಕೆ ಸಹಕಾರಿ ಆಗಿದ್ದು ಭವಿಷ್ಯದ ದೃಷ್ಟಿಯಿಂದ ಇದು ಅತ್ಯುತ್ತಮ ಯೋಜನೆ ಆಗಿದೆ.
ಆದರೆ ಈ ಯೋಜನೆ ಮೇಲೆ ಅಮೆರಿಕದ ಕಣ್ಣು ಬಿದ್ದಿದೆ. ಆದ್ರೆ ಈವರೆಗೂ ಭಾರತ ಅಮೆರಿಕ ಹೇಳಿಕೆಗೆ ಪ್ರತಿಕ್ರಿಯೆಯನ್ನ ನೀಡಿಲ್ಲ. ಈ ಮೂಲಕ ಭಾರತವು ಕೂಡ ಅಮೆರಿಕದ ಹೇಳಿಕೆ ಬಗ್ಗೆ ಜಾಣ ನಡೆ ಇಡುತ್ತದೆ ಎಂದು ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞರು ಹೇಳಿಕೆ ನೀಡಿದ್ದಾರೆ.