ಸರಕಾರದ ವಿರುದ್ಧ ದಂಗೆ ನಡೆಯುವ ಸಾಧ್ಯತೆಯಿದೆ ಎಂದು ಟರ್ಕಿಯ `ನ್ಯಾಷನಲಿಸ್ಟ್ ಮೂವ್ಮೆಂಟ್ ಪಾರ್ಟಿ(ಎಂಎಚ್ಪಿ) ಅಧ್ಯಕ್ಷ ಡೆವ್ಲೆಟ್ ಬಹ್ಸೆಲಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಗುಪ್ತಚರ ಇಲಾಖೆಯ ಮುಖ್ಯಸ್ಥರು ಹಾಗೂ ನ್ಯಾಯ ಇಲಾಖೆಯೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
ಈ ಬಗ್ಗೆ ಟರ್ಕಿಯ ಮುಖ್ಯ ಪ್ರಾಸಿಕ್ಯೂಟರ್ ಕಚೇರಿ ತನಿಖೆಯನ್ನು ಆರಂಭಿಸಿದೆ. ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಬಹ್ಸೆಲಿ `2016ರ ದಂಗೆ ಪ್ರಯತ್ನ ಪುನರಾವರ್ತನೆ ಆಗಬಹುದು. ಸರಕಾರದ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆಯಿದೆ ‘ ಎಂದು ಹೇಳಿದ್ದಾರೆ.
ಕ್ರಿಮಿನಲ್ ಸಂಘಟನೆಯ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಟರ್ಕಿಯ ನ್ಯಾಯಾಂಗ ಇಲಾಖೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದೆ. ಕೆಲವು ಪೊಲೀಸರ ವಿರುದ್ಧ ಕ್ರಮ ಕೈಗೊಂಡರೆ ಸಾಲದು. ಸರಕಾರದ ವಿರುದ್ಧ ದಂಗೆಗೆ ಪಿತೂರಿ ನಡೆದಿರುವ ಸಾಧ್ಯತೆಯಿದೆ ಎಂದು ಬಹ್ಸೆಲಿ ಎಚ್ಚರಿಕೆ ನೀಡಿದ್ದರು.