ಕನ್ನಡದ ಹುಡುಗಿ ಸದ್ಯ ಬಾಲಿವುಡ್ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನಲ್ಲಿರುವ ಅಟಲ್ ಸೇತು ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಇದೀಗ ರಶ್ಮಿಕಾ ಮಂದಣ್ಣ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅಟಲ್ ಸೇತು ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿರುವ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ, ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ ಎಂದಿದ್ದಾರೆ.
ಟ್ರಾನ್ಸ್ ಹಾರ್ಬರ್ ಲಿಂಕ್ನಲ್ಲಿ ಪ್ರಯಾಣಿಸುವ ವೀಡಿಯೊವನ್ನು ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ , ‘‘ನನ್ನನ್ನು ನೋಡಬೇಡಿ, ಕಾರಿನ ಹೊರಗೆ ನೋಡಿ. ಏನು ಕಾಣಿಸುತ್ತಿದೆ? ನೀವು ಇನ್ನೂ ಸಮುದ್ರ ಸೇತುವೆಯನ್ನು ನೋಡುತ್ತಿದ್ದರೆ ನಿಮ್ಮ ಕಣ್ಣುಗಳನ್ನು ತೆರೆಯಿರಿ ಬ್ರೋ… ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ಭಾರತದ ಇದುವರೆಗಿನ ಅತಿ ಉದ್ದದ ಸಮುದ್ರ ಸೇತುವೆ, 22 ಕಿಮೀ ಉದ್ದ, 6 ಲೇನ್, ಮತ್ತು ಇದು 2-ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಿಗೆ ಕಡಿತಗೊಳಿಸುತ್ತದೆ. ನಂಬಲಸಾಧ್ಯ, ಅಲ್ಲವೇ? ಕೆಲವು ವರ್ಷಗಳ ಹಿಂದೆ, ಇದು ಸಂಭವಿಸಬಹುದು ಎಂದು ಯಾರು ಭಾವಿಸಿದ್ದರು? ಭಾರತವು ದೊಡ್ಡ ಕನಸು ಕಾಣಲು ಸಾಧ್ಯವಾಗಿದೆ’’ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
“ಕೇವಲ 7 ವರ್ಷಗಳಲ್ಲಿ ಈ ಭವ್ಯವಾದ ಅದ್ಭುತವನ್ನು ನಿರ್ಮಿಸಿದ್ದೇವೆ. ಅಟಲ್ ಸೇತು ಭವಿಷ್ಯದ ಬಾಗಿಲುಗಳನ್ನು ಎಷ್ಟು ಬಲವಾಗಿ ತಟ್ಟಿದ್ದಾರೆ ಎಂದರೆ ಭಾರತಕ್ಕೆ ಹೊಸ ಬಾಗಿಲುಗಳು ತೆರೆದಿವೆ. ಅಟಲ್ ಸೇತು ಸೇತುವೆ ಅಷ್ಟೇ ಅಲ್ಲ ಯುವ ಭಾರತಕ್ಕೆ ಗ್ಯಾರಂಟಿ. ನಮ್ಮ ರಾಷ್ಟ್ರವನ್ನು ಈಗ ತಡೆಯಲಾಗದು. ನೀವು ಇಂತಹ 100 ರಷ್ಟು ಅಟಲ್ ಸೇತು ಸೇತುವೆಗಳನ್ನು ಪಡೆಯಲು ಬಯಸುವಿರಾ? ಎಚ್ಚೆತ್ತುಕೊಂಡು ಅಭಿವೃದ್ಧಿಗಾಗಿ ಮತ ಚಲಾಯಿಸಿ’ ಎಂದು ರಶ್ಮಿಕಾ ಹೇಳಿದರು.