ಪಿಯುಸಿ ವಿದ್ಯಾರ್ಥಿನಿ ಪ್ರಬುದ್ದ ಅನುಮಾನಾಸ್ಪದ ಸಾವು ಕೇಸ್ ಎಚ್ಚರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಮನೆಯ ಬಾತ್ ರೂಂನಲ್ಲಿ 21 ವರ್ಷದ ಹೆಣ್ಣು ಮಗಳು ಕುತ್ತಿಗೆ ಕೊಯ್ದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಳು. ಸದ್ಯ ಈ ಅನುಮಾನಾಸ್ಪದ ಸಾವಿನ ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಬುದ್ದ ಮೊಬೈಲ್ ಅನ್ನು ಸೀಜ್ ಮಾಡಿದ್ದಾರೆ.
ಸದ್ಯ ಪ್ರಬುದ್ದ ಸಾವು ಆತ್ಮಹತ್ಯೆಯೋ? ಕೊಲೆಯೋ? ಅನ್ನೋ ಶಂಕೆಯಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪ್ರಬುದ್ದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಎರಡು ಮೂರು ದಿನಗಳ ಒಳಗಾಗಿ ಮರಣೋತ್ತರ ಪರೀಕ್ಷೆ ವರದಿ ಬರಲಿದೆ
ಆದರೆ ಅದಕ್ಕೂ ಮೊದಲು ವೈದ್ಯರಿಂದ ಮೃತದೇಹದ ಮರಣೋತ್ತರ ಪರೀಕ್ಷೆ ಬಗ್ಗೆ ಮೌಖಿಕ ಒಪಿನಿಯನ್ ಪೊಲೀಸರು ಪಡೆದಿದ್ದಾರೆ. ಮತ್ತೊಂದೆಡೆ ಮೃತ ವಿದ್ಯಾರ್ಥಿನಿ ಮೊಬೈಲ್ ನಲ್ಲಿ ಅಸಲಿ ಸತ್ಯ ತಿಳಿಯಲು ಪೊಲೀಸರು ಜಾಲಾಡ್ತಿದ್ದಾರೆ.
ಕೊಲೆಯೋ ಆತ್ಮಹತ್ಯೆಯೋ ಅನ್ನೊದು ವೈದ್ಯರ ಒಪಿನಿಯನ್ ಹಾಗೂ ವರದಿಯಿಂದ ಗೊತ್ತಾದ್ರೆ, ಘಟನೆ ಹಿಂದಿನ ಅಸಲಿ ಕಾರಣ ಮೊಬೈಲ್ ಪರಿಶೀಲನೆಯಿಂದ ಹೊರಬೀಳೋ ಸಾಧ್ಯತೆಯಿದೆ.
ಪ್ರಬುದ್ಧ ಸಾವಿನ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಮೂರು ಡೆತ್ ನೋಟ್ ಸಿಕ್ಕಿದೆ. ಸದ್ಯ ಈ ಡೆತ್ ನೋಟ್ ಪೊಲೀಸರ ತನಿಖೆಗೆ ಸವಾಲಾಗಿದೆ.
‘ಅಮ್ಮಾ ಸಾರಿ’ ಎಂದು ಮೂರು ಡೆತ್ ನೋಟ್ನಲ್ಲೂ ಬರೆಯಲಾಗಿದೆ ಎನ್ನಲಾಗುತ್ತಿದೆ. ಸದ್ಯ ಆ ಡೆತ್ ನೋಟ್ ನಲ್ಲಿರೋ ಅಕ್ಷರಗಳಿಗೂ ಮೃತ ಪ್ರಬುದ್ದ ನೋಟ್ ಬುಕ್ ನ ಈ ಹಿಂದಿನ ಬರವಣಿಗೆಗೂ ಮ್ಯಾಚ್ ಆಗ್ತಿಲ್ಲ ಎನ್ನಲಾಗ್ತಿದೆ.
ಸದ್ಯ ಸುಬ್ರಹ್ಮಣ್ಯ ಪುರ ಪೊಲೀಸರು ಮನೆಯಲ್ಲಿ ದೊರೆತಿರೋ ಮೂರು ಡೆತ್ ನೋಟ್ ಹಾಗೂ ಮೃತ ಪ್ರಬುದ್ದ ಹಳೆಯ ಕೈ ಬರವಣಿಗೆಯನ್ನ ಸಾಮ್ಯತೆಗೆ ಎಫ್.ಎಸ್.ಎಲ್ ಗೆ ಕಳಿಸಲು ಮುಂದಾಗಿದ್ದಾರೆ. ಡೆತ್ ನೋಟ್ ನಲ್ಲಿನ ಬರಹ ಪ್ರಬುದ್ದಳದ್ದೇನಾ ಅಥವಾ ಬೇರೆಯದ್ದ ಅನ್ನೊದು ಎಫ್.ಎಸ್.ಎಲ್ ರಿಪೋರ್ಟ್ ನಿಂದ ಗೊತ್ತಾಗಲಿದೆ