ಮೇ 12ರ ಸಂಜೆ ಮುಂಬೈನ ಘಾಟ್ ಕೋಪರ್ ನಲ್ಲಿ ಸಂಭವಿಸಿದ ಭೀಕರ ಗಾಳಿ ಮಳೆಗೆ ಬೃಹತ್ ಜಾಹೀರಾತು ಫಲಕ ಕುಸಿದು ಬಿದ್ದಿತ್ತು. ಪರಿಣಾಮ ಮಳೆಯಿಂದಾಗಿ ಪೆಟ್ರೋಲ್ ಬಂಕ್ನಲ್ಲಿ ನಿಂತುಕೊಂಡಿದ್ದ 16 ಮಂದಿ ಸಾವಿಗೀಡಾಗಿದ್ದು, 75 ಮಂದಿ ಗಾಯಗೊಂಡಿದ್ದರು. ಈ ಅವಘಡದಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರ ಹತ್ತಿರದ ಸಂಬಂಧಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈಚೆಗೆ ಅವರ ಅಂತ್ಯಕ್ರಿಯೆಯಲ್ಲಿ ನಟ ಕಾರ್ತಿಕ್ ಆರ್ಯನ್ ಭಾಗಿಯಾಗಿದ್ದರು.
ಮೃತರನ್ನು ವಾಯು ಸಂಚಾರ ನಿಯಂತ್ರಣ ಜನರಲ್ ಮ್ಯಾನೇಜರ್ ಮನೋಜ್ ಚನ್ಸೋರಿಯಾ ಮತ್ತು ಅವರ ಪತ್ನಿ ಅನಿತಾ ಚನ್ಸೋರಿಯಾ ಎಂದು ಗುರುತಿಸಲಾಗಿದೆ. ಇವರು ಕಾರ್ತಿಕ್ ಆರ್ಯನ್ ಅವರ ಹತ್ತಿರದ ಸಂಬಂಧಿಗಳು. ಮೇ 15ರಂದು ಮನೋಜ್ ಮತ್ತು ಅನಿತಾ ಅವರ ಮೃತದೇಹಗಳು ಪತ್ತೆಯಾಗಿದ್ದು, ಮೇ 16ರಂದು ಅವರ ಅಂತ್ಯಕ್ರಿಯೆಯನ್ನು ಮಾಡಲಾಗಿದೆ. ಈ ವೇಳೆ ನಟ ಕಾರ್ತಿಕ್ ಆರ್ಯನ್ ಕೂಡ ಹಾಜರಿದ್ದರು.
ಇನ್ನು, ಹೋರ್ಡಿಂಗ್ ಅಳವಡಿಸಿದ್ದ ಮಾಲೀಕ ಭವೇಶ್ ಪ್ರಭುದಾಸ್ ಭಿಂದೆ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ, ಭವೇಶ್ ವಿರುದ್ಧ ಇದಕ್ಕೂ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿರುವುದು ಗೊತ್ತಾಗಿದೆ. ಅಲ್ಲದೆ, ಈತ ಅಕ್ರಮವಾಗಿ ಹೋರ್ಡಿಂಗ್ ಅಳವಡಿಸುತ್ತಾನೆ ಎಂದು ಮುಂಬೈ ಮಹಾನಗರ ಪಾಲಿಕೆಯು ಭವೇಶ್ಗೆ 21 ಬಾರಿ ದಂಡ ವಿಧಿಸಿತ್ತು.