ನವದೆಹಲಿ: ಬಿರ್ಲಾ ಕುಟುಂಬದ ಪ್ರಮುಖ ಕಂಪನಿಯಾದ ಕೆಸೊರಾಮ್ ಇಂಡಸ್ಟ್ರೀಸ್ ನ ಮುಖ್ಯಸ್ಥೆ ಮಂಜುಶ್ರೀ ಖೇತಾನ್ (69) ಅವರು, ಗುರುವಾರ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಗುರುವಾರದಂದು ಕೋಲ್ಕತಾದಲ್ಲಿರುವ ಬಿರ್ಲಾ ಪಾರ್ಕ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಂಜೆಯೇ ಕೋಲ್ಕತಾದಲ್ಲಿ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಮಂಜುಶ್ರೀ ಖೇತಾನ್ ಅವರ ಸೋದರ ಸಂಬಂಧಿಯಾದ ಕುಮಾರ ಮಂಗಲಂ ಬಿರ್ಲಾ ಹಾಗೂ ಬಿರ್ಲಾ ಖಾನ್ ದಾನ್ ನ ಇನ್ನಿತರ ಸಂಬಂಧಿಕರು ಭಾಗವಹಿಸಿದ್ದರು.
1998ರಲ್ಲಿ ಕೆಸೊರಾಮ್ ಇಂಡಸ್ಟ್ರೀಸ್ ಕಂಪನಿಯ ಆಡಳಿತ ಮಂಡಳಿಯನ್ನು ಸೇರಿದ್ದ ಮಂಜುಶ್ರೀ, 2013ರಲ್ಲಿ ಆ ಕಂಪನಿಯ ಎಕ್ಸಿಕ್ಯುಟಿವ್ ವೈಸ್ ಚೇರ್ಮನ್ ಆಗಿ ನೇಮಕಗೊಂಡರು. ಕೆಸೊರಾಮ್ ಇಂಡಸ್ಟ್ರೀಸ್ ಹೆಸರಿನಲ್ಲಿ ಹಲವಾರು ಕಂಪನಿಗಳು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2019ರಲ್ಲಿ ತಮ್ಮ ತಂದೆ ಬಿ.ಕೆ. ಬಿರ್ಲಾ ಅವರು ನಿಧನರಾದ ನಂತರ, ಕಂಪನಿಯ ನಾನ್- ಎಕ್ಸ್ ಕ್ಯುಟಿವ್ ಮುಖ್ಯಸ್ಥೆಯಾಗಿ ಅವರು ನೇಮಕಗೊಂಡರು.