ನಿನ್ನೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಬರೆದಿದ್ದಾರೆ.
ಅಭಿಮಾನಿಗಳ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ತಂಡವನ್ನು ಸೋಲಿಸಿ 14 ಅಂಕ ಗಳಿಸಿದೆ.
ಆ ಮೂಲಕ ರುತುರಾಜ್ ಗಾಯಕ್ವಾಡ್ ತಂಡವನ್ನು ಮನೆಗೆ ಕಳುಹಿಸಿದೆ. ರನ್ರೇಟ್ನಲ್ಲಿ ಸಿಎಸ್ಕೆ ತಂಡವನ್ನು ಮಣಿಸಿದ ಆರ್ಸಿಬಿ 9ನೇ ಬಾರಿಗೆ ಪ್ಲೇಆಫ್ಗೆ ಅರ್ಹತೆ ಪಡೆದಿದ್ದಾರೆ. ಚೆನ್ನೈ ವಿರುದ್ಧ ಕೊಹ್ಲಿ 47 ರನ್ ಗಳಿಸಿದ್ದಾರೆ. ಐಪಿಎಲ್ ಸರಣಿಯಲ್ಲಿ ಬೆಂಗಳೂರು ಮೈದಾನದಲ್ಲಿ ಕೊಹ್ಲಿ 89 ಪಂದ್ಯ ಆಡಿದ್ದಾರೆ. ಅದರಲ್ಲಿ 3005 ರನ್ ಬಾರಿಸಿದ್ದಾರೆ. ಆ ಮೂಲಕ ಒಂದೇ ಸ್ಥಳದಲ್ಲೇ 3 ಸಾವಿರ ರನ್ ದಾಟಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಎಸ್ಕೆ ವಿರುದ್ಧ ವಿರಾಟ್ 3 ಅರ್ಧಶತಕ ಬಾರಿಸಿ 280 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟಿ20ಐ ಭಾರತದ ನೆಲದಲ್ಲಿ 9 ಸಾವಿರ ರನ್ಗಳ ಮೈಲುಗಲ್ಲು ದಾಟಿದ ಮೊದಲ ಭಾರತೀಯ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಅಂದಹಾಗೆಯೇ ಕೊಹ್ಲಿ ಭಾರತದಲ್ಲಿ ಒಟ್ಟು 268 ಟಿ20 ಪಂದ್ಯ ಆಡಿದ್ದು, 9,014 ರನ್ ಬಾರಿಸಿದ್ದಾರೆ.
ಇದಲ್ಲದೆ, ಪ್ರಸಕ್ತ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಂದಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ 37 ಸಿಕ್ಸ್ ಬಾರಿಸಿದ್ದಾರೆ. ಇನ್ನು ಈ ಋತುವಿನಲ್ಲಿ 14 ಪಂದ್ಯವಾಡಿದ್ದು, ಒಂದು ಶತಕ, 5 ಅರ್ಧ ಶತಕ ಜೊತೆಗೆ 708 ರನ್ ಬಾರಿಸಿದ್ದಾರೆ.