ಕೇನ್ಸ್ 77ನೇ ಆವೃತ್ತಿಯ ಉತ್ಸವದಲ್ಲಿ ಪಾಲ್ಗೊಳ್ಳಲು ನಟಿ ಶೋಭಿತಾ ಧೂಳಿಪಾಲ ಫ್ರಾನ್ಸ್ ಗೆ ತೆರಳಿದ್ದಾರೆ. ಶೋಭಿತಾ ಧೂಳಿಪಾಲ ಗೋಲ್ಡನ್ ಡ್ರೆಸ್ ನಲ್ಲಿ ಮಿಂಚಿದ್ದು ಅವುಗಳ ಸುಂದರ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಗೋಲ್ಡನ್ ಡ್ರೆಸ್ ನಲ್ಲಿ ಶೋಭಿತಾ ಧೂಳಿಪಾಲ ಗೋಲ್ಡನ್ ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ.
ತೆಲುಗು ಹೀರೋಯಿನ್ ಗಳು ಆಫರ್ ಗಳಿಗಾಗಿ ಗ್ಲಾಮರ್ ಶೋಗಳ ಜೊತೆಗೆ ಬೋಲ್ಡ್ ಮಾತುಗಳಿಂದಲೂ ನಟಿಯರು ಗಮನ ಸೆಳೆಯುತ್ತಿದ್ದಾರೆ. ಇದೀಗ ತೆಲುಗು ನಟಿ ಮಾಡಿರುವ ಕಮೆಂಟ್ ವೈರಲ್ ಆಗಿತ್ತು.
ತೆಲುಗು ನಟಿಯರು ಇದೀಗ ಕಾಲಿವುಡ್, ಬಾಲಿವುಡ್ ಇಂಡಸ್ಟ್ರಿಯಲ್ಲೂ ಮಿಂಚುತ್ತಿದ್ದಾರೆ. ಹಿಂದಿ ಸಿನಿಮಾಗಳಲ್ಲಿಯೂ ನಟಿ ಮಣಿಯರಿಗೆ ಡಿಮ್ಯಾಂಡ್ ಹೆಚ್ಚಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರು ಗ್ಲಾಮರ್ ಪ್ರದರ್ಶನ ಮಾಡ್ತಾರೆ. ಇತ್ತೀಚೆಗೆ ತೆಲುಗು ಹುಡುಗಿ ಸೋಭಿತಾ ಧೂಳಿಪಾಲ ಕ್ರೇಜಿ ಕಾಮೆಂಟ್ ಗಳನ್ನು ಮಾಡಿದ್ದರು.
ಸೋಭಿತಾ ಧೂಳಿಪಾಲ ಫೆಮಿನಾ ಮಿಸ್ ಇಂಡಿಯಾ 2013 ಸ್ಪರ್ಧೆಯಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದರು. ಅವರು 2016 ರಲ್ಲಿ ರಮಣ್ ರಾಘವ್ 2.0 ಸಿನಿಮಾ ಮೂಲಕ ನಟಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ರು. ಗೂಡಾಚಾರಿ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿಕೊಟ್ಟರು.
ಇತ್ತೀಚೆಗಷ್ಟೇ ಶೋಭಿತಾ ಧೂಳಿಪಳ್ಳ ಹಾಲಿವುಡ್ ಚಿತ್ರ ಮಂಕಿ ಮ್ಯಾನ್ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.