ನಾದಿನಿ ಜೊತೆ ಸೆಲ್ಫಿ ತೆಗೆದುಕೊಂಡ ಎಂಬ ಕಾರಣಕ್ಕೆ ಕೋಪಗೊಂಡ ವಧು, ಲೋ ನಿನ್ಗೇನ್ ಬಂದಿರೋದು ನನ್ ತಂಗಿ ಜೊತೆಗೆನೇ ಹಲ್ಲು ಕಿರಿದು ಸೆಲ್ಫಿ ತೆಗೋತಿಯಾ ಮಾಡ್ತೀನಿ ಇರು ಎನ್ನುತ್ತಾ ಮದುವೆ ಮಂಟಪದಲ್ಲಿಯೇ ವರನ ಕೆನ್ನೆಗೆ ಬಾರಿಸಿದ್ದಾಳೆ. ಈ ವಿಡಿಯೋ ದೃಶ್ಯಾವಳಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರನಿಗೆ ಕಪಾಳಮೋಕ್ಷ ಮಾಡುವಂತಹ ದೃಶ್ಯವನ್ನು ಕಾಣಬಹುದು. ಮದುವೆ ಕಾರ್ಯಕ್ರಮವೊಂದರಲ್ಲಿ ಫೋಟೋ ಸೇಶನ್ ವೇಳೆ ಮದುಮಕ್ಕಳ ಪಕ್ಕದಲ್ಲಿ ಕುಳಿತ ವಧುನಿನ ತಂಗಿ ತನ್ನ ಭಾವನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾಳೆ. ವರ ಕೂಡಾ ನಗುತ್ತಾ ಸೆಲ್ಫಿಗೆ ಪೋಸ್ ನೀಡುತ್ತಾನೆ. ಇದರಿಂದ ಕೋಪಗೊಂಡ ವಧು, ಲೋ ನಿನ್ಗೇನ್ ಬಂದಿರೋದು, ನನ್ ತಂಗಿ ಜೊತೆಗೆನೇ ಹಲ್ಲು ಕಿರಿದು ಸೆಲ್ಫಿ ತೆಗೋತಿಯಾ.. ಮಾಡ್ತೀನಿ ಇರು ಎನ್ನುತ್ತಾ ಮದುವೆ ಮಂಟಪದಲ್ಲಿಯೇ ವರನ ಕೆನ್ನೆಗೆ ಬಾರಿಸಿದ್ದಾಳೆ