ಬೆಂಗಳೂರು ತಂಡ ಸಿಎಸ್ಕೆ ತಂಡವನ್ನು 27 ರನ್ಗಳಿಂದ ಸೋಲಿಸುವ ಮೂಲಕ ಪ್ಲೇ ಆಫ್ಗೆ ಲಗ್ಗೆ ಇಟ್ಟ ನಾಲ್ಕನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯದ ವೇಳೆ ಹಲವು ಅದ್ಭುತ ಕ್ಷಣಗಳು ಕಂಡು ಬಂದವು.
ರಣರೋಚಕ ವಿಜಯದ ನಂತರ ವಿರಾಟ್ ಕೊಹ್ಲಿ ಕೂಡ ಅಳುತ್ತಿರುವ ದೃಶ್ಯ ಕಂಡುಬಂದಿದೆ. ಇದರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಯಂತೆ ವೈರಲ್ ಆಗುತ್ತಿದೆ. ಈ ಪಂದ್ಯದ ಪ್ರಮುಖ ಕ್ಷಣಗಳು ಹೇಗಿತ್ತು ನೋಡೋಣ. ವಿರಾಟ್ ಕೊಹ್ಲಿ ಇರುವ ಆರ್ಸಿಬಿ ತಂಡ ಟೂರ್ನಿಯಿಂದ ಹೊರಗುಳಿಯುತ್ತದೆ ಅಂತಾನೇ ಜನರು ಕೆಲದಿನಗಳ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ಸ್ವತಃ ಆರ್ಸಿಬಿ ಅಭಿಮಾನಿಗಳಿಗೂ ಪ್ಲೇಆಪ್ ಹಂತ ತಲುಪುವ ನಂಬಿಕೆ ಇರಲಿಲ್ಲ. ಆದರೆ ಅಭಿಮಾನಿಗಳ ಹರಕೆ ಮತ್ತು ಆರ್ಸಿಬಿ ಆಟಗಾರರ ಕಠಿಣ ಪರಿಶ್ರಮದಿಂದ ಕೊನೆಗೂ ಆರ್ಸಿಬಿ ಪ್ಲೇಆಫ್ಗೆ ತಲುಪಿದೆ.
ಆರ್ಸಿಬಿ ತಂಡ ಸತತ ಸೋಲಿನಿಂದ ಹೊರಗುಳಿಯುತ್ತೆ ಅಂತಾ ಮಾತನಾಡಿಕೊಳ್ಳುವ ಸಮಯದಲ್ಲಿ ಆರ್ಸಿಬಿಗೆ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಮತ್ತು ತಂಡದ ಭವಿಷ್ಯ ಬೇರೆ ತಂಡಗಳ ಕೈಯಲ್ಲಿಯೂ ಇತ್ತು. ಆದರೆ ಆರ್ಸಿಬಿಯ ಸತತ ಆರು ಗೆಲುವು ಮತ್ತು ಅದೃಷ್ಟದಿಂದ ಈಗ ಆರ್ಸಿಬಿ ಇತಿಹಾಸ ಸೃಷ್ಟಿಸಿದೆ. ನಿನ್ನೆಯ ಭರ್ಜರಿ ವಿಜಯದ ನಂತರ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ
ಕಿಂಗ್ ಕೊಹ್ಲಿ ಭಾವುಕರಾಗಲು ಕಾರಣವೂ ಇದೆ. ನಿನ್ನೆಯ ಪಂದ್ ವೀಕ್ಷಿಸಲು ಕೊಹ್ಲಿ ಪತ್ನಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಬಂದಿದ್ದರು. ವಿರಾಟ್ ಕೊಹ್ಲಿ ಅವರನ್ನು ನಿರಾಸೆಗೊಳಿಸಲಿಲ್ಲ. ಈ ಪಂದ್ಯದಲ್ಲಿ ವಿರಾಟ್ 29 ಎಸೆತಗಳಲ್ಲಿ 47 ರನ್ ಗಳಿಸಿದ್ದರು. ಇದಾದ ಬಳಿಕ ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಡ್ಯಾರಿಲ್ ಮಿಚೆಲ್ ಗೆ ಕ್ಯಾಚ್ ನೀಡಿದರು. ವಿರಾಟ್ 49 ರನ್ ಗಳಿಸಿ ಔಟಾದರು. ಇದು ಅನುಷ್ಕಾ ಶರ್ಮಾಗೂ ಭಾರೀ ಬೇಸರ ಮೂಡಿಸಿತ್ತು.
ಆರ್ಸಿಬಿಯ ಹೀನಾಯ ಆರಂಭ ಮತ್ತು ಗೆಲ್ಲಲೇಬೇಕಾದ ಅನಿವಾರ್ಯತೆಯಿಂದ ಸತತವಾಗಿ ಆರು ಪಂದ್ಯಗಳನ್ನು ಗೆದ್ದು ಅಭಿಮಾನಿಗಳ ಆಸೆಯನ್ನು ಪೂರೈಸಿದ ಕ್ಷಣವನ್ನು ನೆನೆದು ನಿನ್ನೆ ವಿರಾಟ್ ಕೊಹ್ಲಿ ಅವರು ಭಾವುಕರಾಗಿ ಕಣ್ಣೀರು ಸುರಿಸಿದರು. ವಿರಾಟ್ ಕಣ್ಣೀರು ಕಂಡು ಸ್ಟೇಡಿಯಂನಿಂದಲೇ ಅನುಷ್ಕಾ ಪ್ರೀತಿಯ ಹೂಮಳೆಗೈದರು.
ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕೂಡ ನಿನ್ನೆಯ ಪಂದ್ಯದ ಭಾಗವಾಗಿದ್ದರು. ಪಂದ್ಯ ಯಾರ ಪರವಾಗಿ ಹೋಗಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಇದ್ದಾಗ ಪಂದ್ಯದ ವೇಳೆ ಅದ್ಭುತ ಕ್ಷಣವನ್ನು ಸೆರೆಹಿಡಿಯಲಾಯಿತು. ಅಂತಹ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಸಾಕ್ಷಿ ಮತ್ತು ಮಗಳು ಜೀವಾ ಕೂಡ ಟೆನ್ಷನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 5 ವಿಕೆಟ್ಗೆ 218 ರನ್ ಗಳಿಸಿತು. ನಾಯಕ ಡುಪ್ಲೆಸಿಸ್ ಅರ್ಧಶತಕ ಗಳಿಸಿದರೆ, ವಿರಾಟ್ ಕೊಹ್ಲಿ 47 ರನ್ ಗಳಿಸಿ ಔಟಾದರು. ರಜತ್ ಪಾಟಿದಾರ್ 41 ರನ್ ಕೊಡುಗೆ ನೀಡಿದರು. ಪ್ಲೇಆಫ್ಗೆ ಪ್ರವೇಶಿಸಲು, RCB CSK ಅನ್ನು 200 ಕ್ಕೆ ನಿರ್ಬಂಧಿಸಬೇಕಾಗಿತ್ತು. CSK ಕೆಟ್ಟ ಆರಂಭವನ್ನು ಶುರುಮಾಡಿ ಪಂದ್ಯವನ್ನು ಕಳೆದುಕೊಂಡಿತು.