ರೋಣ:– ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಮೃತಪಟ್ಟ ಭಕ್ತ ಸಾವಿಗೀಡಾಗಿ, ಪ್ರಾಣ ಕಳೆದುಕೊಂಡ ಇಲ್ಲಿನ ನಿವಾಸಿ ಮಲ್ಲಪ್ಪ ಲಿಂಗನ ಗೌಡ್ರ ಶಾಸಕ ಜಿ ಎಸ್ ಪಾಟೀಲ್ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿಗಳನ್ನು ನೀಡಿ, ಮೃತ ಕುಟುಂಬದ ಜತೆಗೆ ನಾನು ಸದಾ ಇರುತ್ತೇನೆ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡುತ್ತೇವೆ. ಹೆಚ್ಚಿನ ನೆರವು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕಲ್ಪಿಸಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಮೃತ ಮಲ್ಲಪ್ಪ ಲಿಂಗನ ಗೌಡ್ರ ಪತ್ನಿ, ಮೂವರು ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರನ್ನು ಮಾತನಾಡಿಸಿ ಅವರ ದು:ಖದಲ್ಲಿ ತಾವು ಭಾಗಿಯಾಗಿದ್ದಾಗಿ ತಿಳಿಸಿದರು.
ಘಟನೆಯ ಬಗ್ಗೆ ಈಗಾಗಲೇ ಪೊಲೀಸರು ಮಾಹಿತಿಯನ್ನು ಪಡೆದಿದ್ದೇನೆ ಹಾಗೂ ನಗರದಲ್ಲಿ ಇನ್ನೂ ಮುಂದೆ ಈ ರೀತಿ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ಪ್ರಮುಖರಾದ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ ಎಸ್ ಪಾಟೀಲ ರಾಜಣ್ಣ ಸುಂಕದ
.ಮಾಜಿ ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ.
ರಾಜಣ್ಣ ಗಿರಡ್ಡಿ ಗದಿಗೆಪ್ಪ ಕಿರೆಸೂರ ಸಂಗು ನವಲಗುಂದ ನಿಂಬಣ್ಣ ಗಾಣಿಗೇರ ಅಭಿಷೇಕ ನವಲಗುಂದ ಇದ್ದರು