ಪ್ರಾಥಮಿಕ ಹಂತದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪೋತ್ರಾಹಿಸಬೇಕು,ಮಕ್ಕಳ ಭವಿಷ್ಯ ನಿರ್ಮಾಣವಾಗಲು ಶಿಕ್ಷಣ ಅವಶ್ಯಕ ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಅವರ ಕಲಿಕೆ ಕಡೆಗೂ ಗಮನ ಹರಿಸುವುದು ಅಗತ್ಯವಾಗಿದೆ ಎಂದು ರಬಕವಿ-ಬನಹಟ್ಟಿ ತಾಲ್ಲೂಕಾ ನೇಕಾರ ಸಮುದಾಯಗಳು ಒಕ್ಕೂಟದ ಮಹಿಳಾ ವಿಭಾಗದ ಅಧ್ಯಕ್ಷ ಶ್ರೀಮತಿ ಹೇಮಲತಾ ಪಟ್ಟಣ ಹೇಳಿದರು
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಶ್ರೀ ಜೇಡರ ದಾಸಿಮಯ್ಯ ಕಾಲೋನಿಯಲ್ಲಿ ನೇಕಾರ ಸಮುದಾಯದ ಕುಮಾರಿ ಕೀರ್ತನಾ ಶ್ರೀಶೈಲ ಗಡೆಪ್ಪನವರ ಬನಹಟ್ಟಿ ಸರ್ಕಾರಿ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದಲ್ಲಿ ಎರಡನೇ ಸ್ಥಾನ ಪಡೆದ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.
ಇಂದಿನ ವೈಜ್ಞಾನಿಕ, ತಾಂತ್ರಿಕ, ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದರ ಜೊತೆಗೆ ಶಿಸ್ತು ಸಮಯಪಾಲನೆ ಅಭ್ಯಾಸದಡೆಗೆ ಗಮನ ಹರಿಸುವಂತೆ ತೀಳಿ ಹೇಳುವುದು ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ನಗರಸಭೆ ಸದಸ್ಯ ಶಶಿಕಲಾ ಸಾರವಾಡ, ಮಂಜುಳಾ ಸೋರಗಾಂವಿ, ಸಂಗಮೇಶ ಚನಾಳ, ಅನೀಲಚನ್ನಪ್ಪನವರ, ಆನಂದ ಕೋಪರ್ಡೆ, ಶಂಕರ ಶೆಟ್ಟರ, ಉಮೇಶ ಭದ್ರನ್ನವರ, ಶಕುಂತಲಾ ಭದ್ರನ್ನವರ, ಗಂಗವ್ವ ದಳವಾಯಿ, ಲಕ್ಷ್ಮೀ ಗೆದೆಪ್ಪನವರ, ರೂಪಾ ಹೊಸಮನಿ, ಸೇರಿದಂತೆ ಮುಂತಾದವರು