ಕೃಷ್ಣಾ ನದಿ ತಟದಲ್ಲಿರುವ ರೈತರಿಗೆ ಏಳು ತಾಸ್ ಕರೆಂಟ್ ಕೊಡಬೇಕೆಂದು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ.
ಪಕ್ಕದ ಜಿಲ್ಲೆಯಾದ ಬೆಳಗಾವಿ ತಾಲೂಕಿನ ಮಾಂಜರಿ ಸದಲಗ ರಾಯಬಾಗ ಎಲ್ಲಾ ತಾಲೂಕುಗಳಿಗೆ ಕರೆಂಟ್ ಕೊಡ್ತಾ ಇದ್ದಾರೆ ನಮಗೆ ಕೊಡ್ತಾ ಇಲ್ಲ ನಮಗೆಲ್ಲಾ ತಾರತಮ್ಯ ಮಾಡ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಮಗೆ ಪ್ರತಿನಿತ್ಯ 7 ತಾಸ್ ಕರೆಂಟ್ ಕೊಟ್ಟು ರೈತರನ್ನು ಬದುಕಿಸುವ ಕೆಲಸ ಆಗಬೇಕೆಂದು ರೈತರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ
ತೇರದಾಳ ತಹಶೀಲ್ದಾರ ಇದನ್ನೆಲ್ಲ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದು ಸೋಮವಾರ ಏಳು ತಾಸ್ ಕರೆಂಟ್ ಕೊಡಿಸುವಂತೆ ಮಾಡುತ್ತೇನೆಂದು ಹೇಳಿದರು.
ಪ್ರತಿಭಟನೆ ನಡೆಸುತ್ತಿರುವ ರೈತರು ಇದಕ್ಕೆ ಒಪ್ಪಿಕೊಂಡು ಪ್ರತಿಭಟನೆ ಕೈಬಿಟ್ಟರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾವೀರ ಕೋಕಟ್ನೂರ. ಪರಪ್ಪ ಹಿಪ್ಪರಗಿ. ಭಗವಂತ್ ಶಿರೋಳ. ಡಿ ಆರ್ ಪಾಟೀಲ. ಶಂಕರ್ ಹೊನ್ನೂರ್. ವರ್ಧಮಾನ ಕದಹಟ್ಟಿ. ಜಿನ್ನಪ್ಪ ಹೊಸೂರ. ಬುಜುಬಲಿ ಕೆಂಗಾಲಿ. ಸಾಗರ್ ಸಾಮಂತನವರ. ಅಲ್ಲಪ್ಪ ಮದಲಮಟ್ಟಿ. ಪ್ರಕಾಶ್ ಮನ ಶೆಟ್ಟಿ. ಮುತ್ತು ಬದ್ರಶೆಟ್ಟಿ. ಬುಜುಬಲಿ ವೆಂಕಟಾಪುರ ಸೇರಿದಂತೆ ಮುಂತಾದವರು