ಹುಬ್ಬಳ್ಳಿ; ಹುಬ್ಬಳ್ಳಿಯ ವೀರಾಪುರ ಓಣಿಯ ಕುಮಾರಿ ಅಂಜಲಿ ಅಂಬಿಗೇರ ಅವಳನ್ನು ಗಿರೀಶ ಎಂಬ ಯುವಕ ಚಾಕುವಿನಿಂದ ಕೊಲೆಗೈದು ಹತ್ಯೆ ಮಾಡಿದನ್ನೂ ಖಂಡಿಸಿ ನವಲಗುಂದ ಪಟ್ಟಣದ ಅಂಬಿಗೇರ ಚೌಡಯ್ಯ ಸಮಾಜ, ಗಂಗಾಮಾತ ಸಮಾಜ ಹಾಗೂ ಕರುನಾಡು ವಿಜಯಸೇನೆ ಸಂಘಟನೆ ವತಿಯಿಂದ ನವಲಗುಂದ ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರೀತಿಯನ್ನೂ ನಿರಾಕರಿಸಿದ ನೆಪೆಕ್ಕೆ ಕೊಲೆಗಡುಕ ಎಂಬುವನು ಒಂದು ಹೆಣ್ಣನ್ನು ಅಮಾನುಷವಾಗಿ ಕೊಂದದ್ದು ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಪರಿಸ್ಥಿತಿ ಇಲ್ಲದಂತಾಗಿದೆ ಇದರಿಂದ ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯಲ್ಲಿ ಪ್ರೀತಿಯ ನಿರಾಕರಣೆ ಕಾರಣದಿಂದ ಕೊಲೆಯಂತಹ ಸಮಾಜಘಾತುಕ ಕಾರ್ಯಗಳು ನಡೆಯುತ್ತಿವೆ ಆದ್ದರಿಂದ ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆ ಕುರಿತು ಸೂಕ್ತ ಕಾನೂನು ಜಾರಿಗೆ ತರಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ .
ಅಲ್ಲದೆ ಅಂಜಲಿ ಹತ್ಯೆಯನ್ನು ಗೈದ ಗಿರೀಶ ನನ್ನು ಬಂಧಿಸಿ ಆದಷ್ಟು ಬೇಗ ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆ ಹಾಗೂ ಮರಣದಂಡನೆಗೆ ಗುರಿ ಪಡಿಸಬೇಕು ಈ ಮೂಲಕ ಮೃತ ಅಂಜಲಿಗೆ ನ್ಯಾಯ ಒದಗಿಸಿ ಅವಳ ಬಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.
ಇದಕ್ಕೂ ಮುಂಚೆ ವಿವಿಧ ಸಮಾಜ ಸಂಘಟನೆಗಳಿಂದ ಅಂಜಲಿ ಹತ್ಯೆ ಖಂಡಿಸಿ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನೆ ಮೆರವಣಿಗೆ ಮಾಡಲಾಯಿತು.