ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಾಯಿದ್ ಅನ್ವರ್ ಆಕ್ಷೇಪಾರ್ಹ ಹೇಳಿಕೆ ನೀಡಿ, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅನ್ವರ್, ಮೋದಿ ಅವರನ್ನ `ಸೈತಾನ್’ ಎಂದು ಕರೆಯುವ ಮೂಲಕ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಆಜಾನ್ ಕೂಗುವ ವೇಳೆ ಮೋದಿ ಎಷ್ಟು ಬಾರಿ ತಮ್ಮ ಭಾಷಣ ನಿಲ್ಲಿಸಿದ್ರೂ, ಸೈತಾನ್ ಆವಾಹಿಸಿಕೊಂಡ ಹಿಂದೂವಾಗಿಯೇ ಉಳಿಯುತ್ತಾರೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ ಅನ್ವರ್ ಟೀಕಿಸಿದ್ದಾರೆ.
ಗುಜರಾತಿನಲ್ಲಿ ನಡೆದ ಚುನಾವಣಾ ರ್ಯಾಲಿಯ ವೇಳೆ ಆಜಾನ್ ಕೇಳಿಬರುತ್ತಿದ್ದ ವೇಳೆ ಮೋದಿ ತಮ್ಮ ಭಾಷಣಕ್ಕೆ ವಿರಾಮ ಕೊಟ್ಟಿದ್ದರು. ಜೊತೆಗೆ ಆಜಾನ್ಗಾಗಿ ಎಷ್ಟು ಬಾರಿ ಭಾಷಣ ನಿಲ್ಲಿದರೂ ಪರ್ವಾಗಿಲ್ಲ ಎಂದು ಹೇಳಿದ್ದರು. ಈ ಘಟನೆಯನ್ನ ಉಲ್ಲೇಖಿಸಿ ಸಯೀದ್ ಟೀಕಿಸಿದ್ದಾರೆ.
ಈ ಹೇಳಿಕೆ ವಿರುದ್ಧ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೈತಾನ್ ಆವಾಹಿಸಿರುವುದು ಮೋದಿಗಲ್ಲ. ಧರ್ಮಾಂಧತೆಯ ಅಮಲಿನಲ್ಲಿ ಕೋಮು ದ್ವೇಷವನ್ನು ಹಬ್ಬಿಸುತ್ತಿರೋ ಸಯೀದ್ ಅನ್ವರ್ಗೆ ಸೈತಾನ್ ಆವಾಹಿಸಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.