ನನ್ನ ಹೆಸರು ಚಹಾ.. ನನ್ನ ಕಲರ್ ಕೊಂಚ ಕಡಿಮೆ. ಆದರೂ ನನ್ನ ಮೇಲೆ ಹಾಲಿಗೆ ತುಂಬಾ ಪ್ರೀತಿ. ನನಗೂ ಹಾಲಿನ ಮೇಲೆ ತುಂಬಾನೇ ಲವ್. ನಾವಿಬ್ಬರೂ ಜೊತೆಯಾಗಿ ಜನರ ಅದೆಷ್ಟೋ ಸಮಸ್ಯೆಗಳನ್ನ ನಿವಾರಿಸುತ್ತೇವೆ. ಹೀಗಾಗಿ ನನ್ನ ಮೇಲೆ ಅಧಿಕ ಜನ ಪ್ರೀತಿ ಇಟ್ಟುಕೊಂಡಿದ್ದಾರೆ. ಹೌದು… 2007 ರಲ್ಲಿ ಟೀ ಬೋರ್ಡ್ ಆಫ್ ಇಂಡಿಯಾ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಚಹಾದ ಸುಮಾರು 80 ಪ್ರತಿಶತವನ್ನು ದೇಶೀಯ ಜನಸಂಖ್ಯೆಯು ಸೇವಿಸುತ್ತದೆ. ಇದು ದೇಶದ ಜನರಿಗೆ ಚಹಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.
ತಲೆ ನೋವು, ಒತ್ತಡ, ಟೆನ್ಷನ್ ಕಡಿಮೆ ಮಾಡಿ ಫ್ರೆಶ್ನೆಸ್ ಬೇಕು ಅನಿಸುವ ಪ್ರತಿಯೊಬ್ಬರಿಗೂ ಚಹಾ ಅದೆನೋ ಒಂದು ರೀತಿ ಮಾತ್ರೆ ಇದ್ದಂತೆ. ಇದನ್ನು ಕುಡಿದಾಗಲೇ ಕೆಲವರ ತಲೆ ಓಡೋದು. ಕಚೇರಿಗಳಲ್ಲಿ ಕೆಲ ಮಾಡುವವರಿಗಂತೂ ಕಡಿಮೆ ಅಂದರೂ ದಿನಕ್ಕೆ ಎರಡು ಬಾರಿ ಚಹಾ ಬೇಕೇ ಬೇಕು. ಅದೆಷ್ಟೇ ಒತ್ತಡದ ಕೆಲಸವಿದ್ದರು ಒಂದು ಬ್ರೇಕ್ ಹಾಕಿ ಚಹಾ ಕುಡಿದುಬಿಟ್ಟರೆ ಹೊಸ ಉಲ್ಲಾಸವೇ ಮೂಡುತ್ತದೆ. ಹೀಗೇ ಚಹಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಅಂತರರಾಷ್ಟ್ರೀಯ ಚಹಾ ದಿನದ ಶುಭಾಶಯಗಳು. ಪ್ರತಿ ವರ್ಷ ಮೇ 21 ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ಚಹಾ ಕಾರ್ಮಿಕರ ಸುರಕ್ಷಿತ ಕೆಲಸದ ಪರಿಸ್ಥಿತಿಗಳು, ನ್ಯಾಯಯುತ ವ್ಯಾಪಾರ ಮತ್ತು ಚಹಾ ಉತ್ಪಾದನೆಯನ್ನು ಸುಧಾರಿಸಲು ಸುಸ್ಥಿರ ವಾತಾವರಣದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
UN ಆಹಾರ ಮತ್ತು ಕೃಷಿ ಸಂಸ್ಥೆಗೆ ಅಧಿಕೃತ ರಜಾದಿನವಾಗಲಿದೆ ಎಂಬ ಭರವಸೆಯೊಂದಿಗೆ ಟೀ ಬೋರ್ಡ್ ಆಫ್ ಇಂಡಿಯಾ ಈ ದಿನವನ್ನು ಯೋಜಿಸಿದೆ. ನಾವು ಸೇವಿಸುವ ಚಹಾದ ಬಗ್ಗೆ ಕೇಳಲು ಮತ್ತು ಚಹಾ ಕಾರ್ಮಿಕರಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಗ್ರಾಹಕರು ಹಕ್ಕನ್ನು ಹೊಂದಿದ್ದಾರೆ. ಜೊತೆಗೆ ಉತ್ಪಾದನಾ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕೆಂದು ನಾವು ಒತ್ತಾಯಿಸಬಹುದು.
ಅಂತರಾಷ್ಟ್ರೀಯ ಚಹಾ ದಿನದ ಇತಿಹಾಸ
ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ ಮೊದಲ ಅಂತರರಾಷ್ಟ್ರೀಯ ಚಹಾ ದಿನವನ್ನು 2005 ರಲ್ಲಿ ಭಾರತದ ದೆಹಲಿಯಲ್ಲಿ ನಡೆಸಲಾಯಿತು. 2015 ರಲ್ಲಿ ಭಾರತ ಸರ್ಕಾರ ಜಾಗತಿಕವಾಗಿ ಈ ದಿನವನ್ನು ವಿಸ್ತರಿಸಲು ಪ್ರಸ್ತಾಪಿಸಿತು. ಈ ದಿನವನ್ನು ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಏಕೆಂದರೆ ವರ್ಷದ ಈ ಸಮಯದಲ್ಲಿ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯು ಪ್ರಾರಂಭವಾಗುತ್ತದೆ.
ಅಂತರಾಷ್ಟ್ರೀಯ ಚಹಾ ದಿನದ ಉಲ್ಲೇಖಗಳು, ಶುಭಾಶಯಗಳು
ಅಂತರರಾಷ್ಟ್ರೀಯ ಚಹಾ ದಿನದ ಉಲ್ಲೇಖಗಳು, ಶುಭಾಶಯಗಳು ನನ್ನ ಪ್ರೀತಿಯ, ನನ್ನ ತಲೆಯ ಗೊಂದಲವನ್ನು ತೆರವುಗೊಳಿಸಲು ನೀವು ನನಗೆ ಒಂದು ಕಪ್ ಚಹಾವನ್ನು ನೀಡಿದರೆ, ನಾನು ನಿಮ್ಮ ವ್ಯವಹಾರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ -ಚಾರ್ಲ್ಸ್ ಡಿಕನ್ಸ್
ನಿಮ್ಮ ಚಹಾವನ್ನು ನಿಧಾನವಾಗಿ ಮತ್ತು ಭಕ್ತಿಯಿಂದ ಕುಡಿಯಿರಿ. ಅದು ವಿಶ್ವ ಭೂಮಿಯು ಸುತ್ತುತ್ತಿರುವ ಅಕ್ಷದಂತೆ – ಥಿಚ್ ನಾತ್ ಹನ್, ಮೈಂಡ್ಫುಲ್ನೆಸ್ನ ಪವಾಡ “ನೀವು ತಣ್ಣಗಾಗಿದ್ದರೆ, ಚಹಾ ನಿಮ್ಮನ್ನು ಬೆಚ್ಚಗಾಗಿಸುತ್ತದೆ. ನೀವು ತುಂಬಾ ಬಿಸಿಯಾಗಿದ್ದರೆ, ಅದು ನಿಮ್ಮನ್ನು ತಂಪಾಗಿಸುತ್ತದೆ. ನೀವು ಖಿನ್ನತೆಗೆ ಒಳಗಾಗಿದ್ದರೆ, ಅದು ನಿಮ್ಮನ್ನು ಹುರಿದುಂಬಿಸುತ್ತದೆ. ನೀವು ಉತ್ಸುಕರಾಗಿದ್ದರೆ, ಅದು ನಿಮ್ಮನ್ನು ಶಾಂತಗೊಳಿಸುತ್ತದೆ.”
ಅಂತರಾಷ್ಟ್ರೀಯ ಚಹಾ ದಿನವನ್ನು ಒಂದು ಕಪ್ ಚಹಾದೊಂದಿಗೆ ಆರಂಭಿಸಿ.
ನೀವು ಪ್ರಯತ್ನಿಸಬಹುದಾದ ಹಲವಾರು ರೀತಿಯ ಚಹಾಗಳಿವೆ. ಇವುಗಳಲ್ಲಿ ಕೆಲವು ಕಾಶ್ಮೀರಿ ಕಹ್ವಾ, ಶುಂಠಿ ಚಹಾ, ತುಳಸಿ ಚಹಾ, ಸುಲೈಮಾನಿ ಚಹಾ, ರೋಂಗಾ ಚಹಾ, ಮಸಾಲಾ ಚಹಾ, ಲೆಮೊನ್ಗ್ರಾಸ್ ಚಹಾ, ಹಸಿರು ಚಹಾ, ಇತರವುಗಳಾಗಿವೆ.