ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ತಮಗೆ ದೀರ್ಘ ಕಾಲದಿಂದ ಕಾಡುತ್ತಿರುವ ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ತೆಗೆದುಕೊಳ್ಳಲು ಲಂಡನ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಇತ್ತೀಚಿನ ವರದಿಗಳ ಮೂಲಕ ತಿಳಿದುಬಂದಿದೆ. ಐಪಿಎಲ್ 2023 ಟೂರ್ನಿಯಲ್ಲಿ ಸಿಎಸ್ಕೆಗೆ ದಾಖಲೆಯ 5ನೇ ಟ್ರೋಫಿ ಗೆದ್ದುಕೊಟ್ಟ ಬಳಿಕ ಎಂಎಸ್ಡಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ತೆಗೆದುಕೊಂಡಿದ್ದರು.
ಇದೀಗ ಐಪಿಎಲ್ 2024 ಟೂರ್ನಿಯಲ್ಲಿ ಸಿಎಸ್ಕೆ ಪ್ಲೇ ಆಫ್ಸ್ ರೇಸ್ನಿಂದ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಶಸ್ತ್ರಚಿಕಿತ್ಸೆ ಸಲುವಾಗಿ ಆಸ್ಪ್ರತೆಗೆ ದಾಖಲಾಗಲಿದ್ದಾರೆ.
ವರದಿಗಳ ಪ್ರಕಾರ ಲಂಡನಿಂದ ಹಿಂದಿರುಗಿದ ಬಳಿಕ ತಮ್ಮ ಶಸ್ತ್ರಚಿಕಿತ್ಸೆ ಯಾವ ರೀತಿಯ ಫಲಿತಾಂಶ ನೀಡಿದೆ ಎಂಬುದನ್ನು ಅರಿತು ನಂತರ ಐಪಿಎಲ್ ವೃತ್ತಿಬದುಕಿನ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಐಪಿಎಲ್ 2023 ಟೂರ್ನಿ ಬಳಿಕ ಅಭಿಮಾನಿಗಳ ಸಲುವಾಗಿ ಮತ್ತೊಂದು ಟೂರ್ನಿ ಆಡುವುದಾಗಿ ಧೋನಿ ಹೇಳಿಕೊಂಡಿದ್ದರು. ಇದೀಗ ಐಪಿಎಲ್ 2024 ಟೂರ್ನಿ ನಂತರ ಕ್ಯಾಪ್ಟನ್ ಕೂಲ್ ಯಾವುದೇ ನಿರ್ಧಾರ ಪ್ರಕಟಿಸದೆ ಮೌನಕ್ಕೆ ಜಾರಿದ್ದಾರೆ.
ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂಡು ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ 27 ರನ್ಗಳ ಸೋಲುಂಡ ಸಿಎಸ್ಕೆ ಪ್ಲೇ ಆಫ್ಸ್ ರೇಸ್ನಿಂದ ಹೊರಬಿದ್ದಿತು. ಆ ಪಂದ್ಯದಲ್ಲಿ ಧೋನಿ 13 ಎಸೆತಗಳಲ್ಲಿ 25 ರನ್ ಬಾರಿಸಿ ಸಿಎಸ್ಕೆ ಗೆಲುವಿಗೆ ಶತಾಯಗತಾಯ ಪ್ರಯತ್ನ ನಡೆಸಿದ್ದರು. ರೋಚಕ ರನ್ ಚೇಸ್ನಲ್ಲಿ ಕೊನೇ ಓವರ್ನಲ್ಲಿ ಧೋನಿ ತಮ್ಮ ವಿಕೆಟ್ ಕೈಚೆಲ್ಲಿ ನಿರಾಶೆಗೊಳಗಾಗಿದ್ದರು.
ಸ್ನಾಯುವಿನಲ್ಲಿ ಕಾಣಿಸಿಕೊಂಡಿರಿವ ಹರಿತದ ಸಮಸ್ಯೆ ನಿವಾರಣೆ ಸಲುವಾಗಿ ಎಂಎಸ್ ಧೋನಿ ಲಂಡನ್ಗೆ ತೆರಳಲಿದ್ದಾರೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ದಕ್ಕೂ ಅವರು ಈ ಗಾಯದ ಸಮಸ್ಯೆ ನಡುವೆಯೇ ಆಡಿದ್ದರು. ಅವರು ಸಂಪೂರ್ಣ ಫಿಟ್ ಇಲ್ಲದೇ ಇದ್ದರೂ ಎಲ್ಲ ಪಂದ್ಯಗಳಲ್ಲಿ ಆಡಲು ಬಯಸಿದ್ದರು. ಇದೀಗ ಶಸ್ತ್ರಚಿಕಿತ್ಸೆ ನಂತರ ತಮ್ಮ ಚೇತರಿಕೆ ಯಾವ ರೀತಿ ಇರಲಿದೆ ಎಂಬುದನ್ನು ಅರಿತು ಐಪಿಎಲ್ ನಿವೃತ್ತಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚಿಕಿತ್ಸೆ ನಂತರ ಕನಿಷ್ಠ 5-6 ತಿಂಗಳ ಸಮಯ ಅವರೊಗೆ ಚೇತರಿಕೆಗೆ ಬೇಕಾಗುತ್ತದೆ,” ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.