ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆ ಆದ ಹನುಮಾನ್ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರದ ಸಕ್ಸಸ್ ನಂತರ ಡೈರೆಕ್ಟರ್ ಪ್ರಶಾಂತ್ ವರ್ಮಾ ‘ರಾಕ್ಷಸ್’ ಸಿನಿಮಾಗಾಗಿ ರಣ್ವೀರ್ ಸಿಂಗ್ ಜೊತೆ ಕೈಜೋಡಿಸಿದ್ದರು. ಕೆಲ ಮನಸ್ತಾಪಗಳಿಂದ ರಣವೀರ್ ಸಿಂಗ್ ‘ಹನುಮಾನ್’ ನಿರ್ದೇಶಕನ ಮುಂಬರುವ ಚಿತ್ರದಿಂದ ಹೊರ ಬಂದಿದ್ದಾರೆ.
ಡೈರೆಕ್ಟರ್ ಪ್ರಶಾಂತ್ ವರ್ಮಾ ಮತ್ತು ರಣ್ವೀರ್ ಸಿಂಗ್ ನಡುವೆ ಕತೆ ಮತ್ತು ಮೇಕಿಂಗ್ ವಿಷಯವಾಗಿ ಭಿನ್ನಾಭಿಪ್ರಾಯಗಳು ಮೂಡಿದ ಕಾರಣದಿಂದ ರಣ್ವೀರ್ ಸಿಂಗ್ ಈ ಸಿನಿಮಾದಿಂದ ಹೊರನಡೆದಿದ್ದಾರೆ. ಇತ್ತೀಚೆಗೆ ರಣ್ವೀರ್ ಹೈದರಾಬಾದ್ಗೆ ಹೋಗಿ ಸಿನಿಮಾದ ಫೋಟೊಶೂಟ್ನಲ್ಲಿ ಸಹ ಭಾಗಿಯಾಗಿ ಬಂದಿದ್ದರು. ಆದರೆ ಅದಾದ ಬಳಿಕ ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ರಣವೀರ್ ಸಿನಿಮಾದಿಂದ ಆಚೆ ಬಂದಿದ್ದಾರೆ.
ರಣ್ವೀರ್ ರಿಂದ ತೆರೆವಾದ ಜಾಗಕ್ಕೆ ಇದೀಗ ನಿರ್ದೇಶಕರು ಬೇರೆ ನಟನ ಹುಟುಕಾಟದಲ್ಲಿ ತೊಡಗಿಕೊಂಡಿದ್ದಾರೆ. ರಣವೀರ್ ಜಾಗಕ್ಕೆ ಸೂಕ್ತ ನಟನನ್ನೇ ತರಬೇಕು ಎಂದು ಚಿತ್ರತಂಡ ಮುಂದಾಗಿದೆ. ಸದ್ಯ ಸಿಂಗಂ ಅಗೇನ್, ಡಾನ್ 3, ಡೈರೆಕ್ಟರ್ ಎಸ್. ಶಂಕರ್ ಜೊತೆ ‘ಅನ್ನಿಯನ್’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್ಗಳು ರಣ್ವೀರ್ ಸಿಂಗ್ ಕೈಯಲ್ಲಿವೆ.