ಇರಾನ್ ಅಧ್ಯಕ್ಷ ಇಬ್ರಾಹೀಂ ರೈಸಿ ಹಾಗೂ ವಿದೇಶಾಂಗ ಸಚಿವ ಹುಸೈನ್ ಆಮಿರ್ ಅಬ್ದುಲಹಿಯಾನ್ ಹಾಗೂ 6 ಮಂದಿ ಇತರರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ವೈಫಲ್ಯದಿಂದಾಗಿ ಅಪಘಾತಕ್ಕೆ ಒಳಗಾಗಿದೆ ಎಂದು ಇರಾನ್ ನ ಸರಕಾರಿ ಮಾಧ್ಯಮ ವರದಿ ಮಾಡಿದೆ.
ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೆ ಒಳಗಾಗಿದ್ದು ಈ ಬಗ್ಗೆ ತನಿಖೆಗೆ ಇರಾನ್ ಮಿಲಿಟರಿ ಆದೇಶಿಸಿದೆ. ಈ ಮಧ್ಯೆ, ರೈಸಿ, ಆಮಿರ್ ಅಬ್ದುಲಹಿಯಾನ್ ಹಾಗೂ ಇತರರ ದುರಂತ ಮರಣಕ್ಕೆ ಅಮೆರಿಕ ಸಂತಾಪ ಸೂಚಿಸಿದ್ದು ಇರಾನ್ನಲ್ಲಿ ನೂತನ ಅಧ್ಯಕ್ಷರ ಅಡಿಯಲ್ಲಿ `ಮೂಲಭೂತ ಸ್ವಾತಂತ್ರ್ಯ ಅಸ್ತಿತ್ವದಲ್ಲಿರುವ’ ಸಮಾಜವನ್ನು ಎದುರು ನೋಡುತ್ತಿರುವುದಾಗಿ ಹೇಳಿದೆ.