ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸೋಷಿಯಲ್ ಮೀಡಿಯಾಗಳ ಬಳಕೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿಕಾರವಾಗಿದೆ. ಹೀಗಾಗಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಖಾತೆಗಳ ನೋಂದಣಿಯನ್ನು ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
ಮಕ್ಕಳು ಆನ್ಲೈನ್ ಬಳಕೆಯಿಂದ ಸಾಮಾಜಿಕ ಒತ್ತಡಗಳಿಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳನ್ನು ನಿಯಂತ್ರಿಸಿದರೆ ಬೆಳೆವಣಿಗೆಗೆ ಹೆಚ್ಚುವರಿ ಸಮಯವನ್ನು ನೀಡಿದಂತಾಗುತ್ತದೆ. ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ತೆರೆಯಲು ಕನಿಷ್ಠ ವಯಸ್ಸನ್ನು 13 ರಿಂದ 16ಕ್ಕೆ ಹೆಚ್ಚಿಸುಬೇಕೆಂಬ ತಿಳಿಸಿದ್ದಾರೆ.
ನಮ್ಮ ಕಿರಿಯ ಆಸ್ಟ್ರೇಲಿಯನ್ನರು ಕ್ರೀಡೆಗೆ ಹೆಚ್ಚು ಸಮಯವನ್ನು ಮೀಸಲಿಡಬೇಕು. ಸಾಮಾನ್ಯ ರೀತಿಯಲ್ಲಿ ಪರಸ್ಪರ ಮಾತು, ಚರ್ಚೆಯಲ್ಲಿ ತೊಡಬೇಕು ಹಾಗೂ ಆನ್ಲೈನ್ನಲ್ಲಿ ಕಡಿಮೆ ಸಮಯವನ್ನು ಕಳೆಯಬೇಕು. ಇದಕ್ಕಾಗಿ ಉತ್ತಮ ಮಾರ್ಗವೆಂದರೆ ಸಾಮಾಜಿಕ ಮಾಧ್ಯಮಗಳ ನಿರ್ಬಂಧ ಎಂದು ಎಫ್ಎಂ ರೇಡಿಯೊಗೆ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕೆಟ್ಟ ಸಂದೇಶಗಳು, ಹೇಳಿಕೆಗಳು ವಯಸ್ಕರಿಗೆ ಹಾನಿ ಮಾಡುತ್ತದೆ. ಇದು ಮಕ್ಕಳ ಮೇಲೆ ಇನ್ನೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ವಿನಾಶಕಾರಿಯಾಗಬಹುದು ಎಂದು ಹೇಳಿದ್ದಾರೆ. ನಾನು ನನ್ನ ಸಾಮಾಜಿಕ ಮಾಧ್ಯಮದಲ್ಲಿನ ಕಾಮೆಂಟ್ಗಳನ್ನು ನೋಡುವುದಿಲ್ಲ. ಏಕೆಂದರೆ ಹಾಗೆ ಮಾಡಿದರೆ ಬೆಳಿಗ್ಗೆ ಮನೆಯಿಂದ ಹೊರಬರಲು ನನಗೆ ಕಷ್ಟವಾಗುತ್ತದೆ. ಜನರು ಅನಾಮಧೇಯವಾಗಿ ಭಯಾನಕವಾದ ವಿಷಯಗಳನ್ನು ಹೇಳುತ್ತಾರೆ ಎಂದು ತಮ್ಮ ಸ್ವಂತ ಅನುಭವವನ್ನು ವಿವರಿಸಿದ್ದಾರೆ.
ನೋವಾ ರೇಡಿಯೊ ನಿರೂಪಕ ಮೈಕೆಲ್ ವಿಪ್ಫ್ಲಿ ಮತ್ತು ಫಿಂಚ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ರಾಬ್ ಗ್ಯಾಲುಝೋ ಅವರು ಸಾಮಾಜಿಕ ಜಾಲಾತಣಗಳ ಬಳಕೆಗೆ ಕನಿಷ್ಠ 16 ವಯಸ್ಸಿಗೆ ಹೆಚ್ಚಿಸಬೇಕೆಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನದ ಹೆಸರು ’36 ತಿಂಗಳು’. ಮಕ್ಕಳು ಸಾಮಾಜಿಕ ಮಾಧ್ಯಮಗಳ ಖಾತೆಯನ್ನು ಹೊಂದಬಹುದಾದ ವಯಸ್ಸಿನ ಮಿತಿಯಲ್ಲಿ 3 ವರ್ಷಗಳನ್ನು ಹೆಚ್ಚಿಸಬೇಕು ಎಂಬುದು ಅಭಿಯಾನದ ಉದ್ದೇಶ. ಸದ್ಯ ಮಕ್ಕಳಿಗೆ 13 ವರ್ಷಗಳ ಮಿತಿ ಇದೆ. ಅದನ್ನು 16 ವರ್ಷಕ್ಕೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಪೋಷಕರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿದೆ.