ಹಾಸನ: ಪ್ರಜ್ವಲ್ ರೇವಣ್ಣ ಬಗ್ಗೆ ನನಗೇನೂ ಮಾಹಿತಿ ಇಲ್ಲ, ಪ್ರಕರಣ ಕೋರ್ಟ್ನಲ್ಲಿ ಇರುವಾಗ ಯಾರ ಬಗ್ಗೆಯೂ ನಾನೇನು ಹೇಳುವುದಿಲ್ಲ ಎಂದು ಶಾಸಕ ಹೆಚ್ʼಡಿ ರೇವಣ್ಣ ಹೇಳಿದರು. ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು. “ನಾನು ದೇವರನ್ನು ನಂಬಿ ಕೆಲಸ ಮಾಡುವವನು.
ನನ್ನ ನಂಬಿದ ಕಾರ್ಯಕರ್ತರೊಂದಿಗೆ ನಾನೆಂದೂ ಇರುತ್ತೇನೆ.
ಕಳೆದ 25 ವರ್ಷದಿಂದ ಶಾಸಕ ಮತ್ತು ಸಚಿವನಾಗಿ ಕೆಲಸ ಮಾಡಿದ್ದೇನೆ. ದೇವೇಗೌಡರ ಕಾಲದಿಂದಲೂ ನಮ್ಮನ್ನು ಬೆಂಬಲಿಸಿದ ಜಿಲ್ಲೆಯ ಜನತೆ ನನ್ನನ್ನು ಎಂದೂ ಕೈ ಬಿಡಲಾರರು ಎಂಬ ನಂಬಿಕೆ ಇದೆ,” ಎಂದರು. ಎಂಎಲ್ಸಿ ಚುನಾವಣೆ, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಈ ಪ್ರಕರಣ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ಈ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ನಮ್ಮ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ,” ಎಂದು ಹೇಳಿದರು.