ಹುಬ್ಬಳ್ಳಿ: ನನ್ನ ಅಕ್ಕ ಅಂಜಲಿಯ ಸಾಯಿಸಿದ ಗಿರೀಶ್ಗೆ ಗಲ್ಲು ಶಿಕ್ಷೆಯಾಗಲಿ ಎಂದು ಮೃತ ಅಂಜಲಿ ಸಹೋದರಿ ಯಶೋಧಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ” ಕೊಲೆಗಾರ ಗಿರೀಶ್ ಬೆನ್ನಹಿಂದೆ ಜನರು ಇದ್ದಾರೆ. ಅವರು ಯಾರು ಅಂತ ತನಿಖೆ ಆಗಲಿ ಅವರಿಗೂ ಸಹ ಕಠಿಣ ಶಿಕ್ಷೆ ಆಗಲಿ ” ಎಂದರು.
ಅಂಜಲಿ ಕೊಲೆ ಪ್ರಕರಣ ಸಿಐಡಿಯಿಂದ ನ್ಯಾಯ ಸಿಗುವ ಭರವಸೆ ಇದೆ, ಆದರೆ ನೇಹಾ ಕೊಲೆಗೆ ಸಿಐಡಿಯಿಂದ ವಿಳಂಬ ಆಗಿದೆ, ನೇಹಾ ಕುಟುಂಬಕ್ಕೆ ಇನ್ನು ಸರಿಯಾಗಿ ನ್ಯಾಯ ಸಿಕ್ಕಿಲ್ಲ, ನನ್ನ ಅಕ್ಕನ ಕೊಲೆಗೆ ಸಹ ನ್ಯಾಯ ಬೇಕು, ನೇಹಾ ಪ್ರಕರಣದಂತೆ ಆಗಬಾರದು ಎಂದು ಹೇಳಿದ್ದಾರೆ. ಸ್ಥಳೀಯ ಪೊಲೀಸರು ಸಮರ್ಥವಾಗಿಲ್ಲ. ಸ್ಥಳೀಯ ಪೊಲೀಸರು ಜವಾಬ್ದಾರಿ ಸರಿಯಾಗಿ ನಿಭಾಯಿಸಿದ್ದರೆ ಅಕ್ಕನಿಗೆ ಈ ಗತಿ ಬರುತಿರಲಿಲ್ಲ ಎಂದರು.
ಅಂಜಲಿ ಕೊಲೆಗಾರ ಗಿರೀಶ್ನನ್ನು ಎನ್ ಕೌಂಟರ್ ಅಥವಾ ಗಲ್ಲಿಗೆ ಏರಿಸಬೇಕು, ಸಿಐಡಿಯಿಂದ ತನಿಖೆ ವಿಳಂಬ ಆದರೆ ಹೋರಾಟ ನಡೆಸುತ್ತೇವೆ. ಇನ್ನು ನಾವು ಹೋರಾಟ ಬಿಟ್ಟಿಲ್ಲ, ಅಕ್ಕ ಅಂಜಲಿ, ನೇಹಾ ಕೊಲೆ ವಿಷಯದಲ್ಲಿ ರಾಜಕಾರಣ ಬೇಡ, ಅಂಜಲಿ ಕೊಲೆಗಾರ ಗಿರೀಶ್ ಹಿಂದೆ ಯಾರು ಇದ್ದಾರೆ ಅಂತಾ ತನಿಖೆ ಆಗಲಿ, ಆತ ಒಬ್ಬನೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ, ಗೀರಿಶ್ ಹಿಂದೆ ಇದ್ದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.