ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಕೋಪಗೊಂಡ ಬಾಲಕ ಪೋಷಕರು ಹಾಗೂ ಅಕ್ಕನನ್ನು ಗುಂಡಿಕ್ಕಿ ಹತ್ಯೆ ಮಾಡಿ ವಾರಗಳ ಕಾಲ ಮೃತದೇಹಗಳ ಜೊತೆ ಕಾಲ ಕಳೆದಿರುವ ಘಟನೆ ಸಾವೊ ಪಾಲೊದಲ್ಲಿ ನಡೆದಿದೆ.
ವಾರಗಳ ಬಳಿಕ ಪೊಲೀಸರಿಗೆ ಕರೆ ಮಾಡಿದ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಮಕ್ಕಳಿಬ್ಬರು ಮೊಬೈಲ್ಗಾಗಿ ಜಗಳವಾಡುತ್ತಿದ್ದರು ಆಗ ಪೋಷಕರು ಮೊಬೈಲ್ನ್ನು ಕಿತ್ತುಕೊಂಡಿದ್ದಕ್ಕೆ ಕೋಪಗೊಂಡ ಬಾಲಕ ಪೋಷಕರು ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ.
ಮುನ್ಸಿಪಲ್ ಪೊಲೀಸ್ ಆಗಿದ್ದ ತಂದೆಯ ಸರ್ವೀಸ್ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸಿದ್ದಾಗಿ ಆತನೇ ತಿಳಿಸಿದ್ದಾನೆ. ಸಹೋದರಿಯ ಮುಖಕ್ಕೂ ಗುಂಡು ಹಾರಿಸಿದ್ದಾನೆ, ಹಲವು ಗಂಟೆಗಳ ಬಳಿಕ ತಾಯಿ ಮನೆಗೆ ಬಂದಾಗ ಅದೇ ರಿವಾಲ್ವರ್ನಿಂದ ಆಕೆಯನ್ನೂ ಕೊಂದಿದ್ದಾನೆ.
ಆತನಿಗೆ ಮಾನಸಿಕ ಸಮಸ್ಯೆ ಏನಾದರೂ ಇತ್ತೇ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಯಾರೊಂದಿಗಾದರೂ ಮಾತನಾಡಿದ್ದಾನೆಯೇ ಯಾರಾದರೂ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಬಾಲಕನನ್ನು ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.