ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅನಾರೋಗ್ಯ ಕಾರಣದಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ವರದಿಗಳ ಪ್ರಕಾರ ಶಾರುಖ್ ಖಾನ್ ಅವರಿಗೆ ಸನ್ ಸ್ಟ್ರೋಕ್ ಆಗಿದೆ ಎನ್ನಲಾಗಿತ್ತು. ಆದರೆ, ಅಸಲಿಗೆ ಅವರಿಗೆ ಸನ್ ಸ್ಟ್ರೋಕ್ ಆಗಿಯೇ ಇಲ್ಲವಂತೆ. ಶಾರುಖ್ ಖಾನ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇದು ವೈರಲ್ ಫಿವರ್ ಎನ್ನಲಾಗುತ್ತಿದೆ. ಸದ್ಯ ಶಾರುಖ್ ಖಾನ್ ಅವರು ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶಾರುಖ್ ಖಾನ್ ಅವರು ಐಪಿಎಲ್ನಲ್ಲಿ ಕೆಕೆಆರ್ ತಂಡದ ಸಹ ಮಾಲಿಕತ್ವ ಹೊಂದಿದ್ದಾರೆ. ಕೆಕೆಆರ್ ಈ ಬಾರಿ ಫೈನಲ್ ತಲುಪಿದೆ. ಶಾರುಖ್ ಖಾನ್ ಅವರು ಕುಟುಂಬದವರ ಜೊತೆ ಫೈನಲ್ ನೋಡಲು ಚೆನ್ನೈ ತೆರಳಲಿದ್ದಾರಂತೆ. ಅವರಿಗೆ ಅನಾರೋಗ್ಯ ಆಗಿದೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈಗ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿರೋ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಶಾರುಖ್ ಆಸ್ಪತ್ರೆಯಿಂದ ಹೊರ ಬರುವ ವೇಳೆ ಮುಖಕ್ಕೆ ಛತ್ರಿಯನ್ನು ಅಡ್ಡವಾಗಿ ಹಿಡಿದುಕೊಂಡಿದ್ದರು. ನಟ ಆರಾಮವಾಗಿದ್ದರೆ ಯಾಕೆ ಮುಖ ಅಡಗಿಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಅಪ್ಡೇಟ್ಗಾಗಿ ಕಾಯುತ್ತಿದ್ದರಿಂದ, ಸೂಪರ್ಸ್ಟಾರ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ನಟ ಸದ್ಯ ಆರೋಗ್ಯವಾಗಿದ್ದಾರೆ ಎಂದರು.
ಪೂಜಾ ದದ್ಲಾನಿ ಟ್ವಿಟರ್ನಲ್ಲಿ ಶಾರುಖ್ ಖಾನ್ ಅವರ ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಿಗಾಗಿ – ಅವರು ಚೆನ್ನಾಗಿದ್ದಾರೆ. ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಕಾಳಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.