ಅಂಜನಾದ್ರಿ ಹನುಮ ಮಂದಿರ ಅಭಿವೃದ್ದಿಗೆ ಹಣ ನೀಡಿಕೆ ವಿಚಾರವಾಗಿ CM ವಿರುದ್ಧ ನಟ ಚೇತನ್ ಆಕ್ರೋಶ ಹೊರ ಹಾಕಿದ್ದಾರೆ.
ಅದೇ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
82 ಕುಟುಂಬಗಳು ಇನ್ನೂ ಕೂಡ ಬಡತನದಲ್ಲಿವೆ. ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಚಿಕ್ಕೋಡಿ ಪಟ್ಟಣದ ರಾಮನಗರ ಅಲೆಮಾರಿ ಜನಾಂಗದವರಿಗೆ ಸೂರು ನೀಡುವಂತೆ ಒತ್ತಾಯಿಸಿದ್ದಾರೆ.
ಜಾತಿ ಜನಗಣತಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಪರ ಕಿಡಿಕಾರಿರುವ ನಟ ಚೇತನ, ಸಿದ್ದರಾಮಯ್ಯ ಅಹಿಂದ ಪರ ಕೆಲಸ ಮಾಡುತ್ತಿಲ್ಲ ಅವರು ಸೋಮಾರಿ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ. ಶ್ರೀಮಂತರ ಆಸ್ತಿ ಬಡವರಿಗೆ ಮರು ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.