ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗದಿದ್ದಾಗ ಉರಿಮೂತ್ರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉರಿಮೂತ್ರಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಮೂತ್ರನಾಳಗಳಲ್ಲಿ ಕಂಡು ಬರುವ ಸೋಂಕು. ಮೂತ್ರನಾಳಗಳಲ್ಲಿ ಏನಾದರೂ ಸೋಂಕಿದ್ದರೆ ಉರಿಯೂತ್ರದ ಸಮಸ್ಯೆ ಕಂಡು ಬರುತ್ತದೆ.
ಇಂಥಾ ಸಮಸ್ಯೆ ಕಂಡು ಬಂದರೆ ಮೂತ್ರ ವಿಸರ್ಜಿಸಿದ ಬಳಿಕವೂ ಮೂತ್ರ ಬರುತ್ತಿರುತ್ತದೆ ಮತ್ತು ಇದು ಕಂಟ್ರೋಲ್ಗೆ ಬರುವುದಿಲ್ಲ. ಇದು ದೈಹಿಕವಾಗಿಯೂ, ಮಾನಸಿಕವಾಗಿಯೂ ತೊಂದರೆಯನ್ನುಂಟು ಮಾಡುತ್ತದೆ.
ಉರಿಮೂತ್ರದಲಕ್ಷಣಗಳುಹೀಗಿವೆ
ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ
ಆಗಾಗ ಮೂತ್ರ ವಿಸರ್ಜನೆಯಾಗುವುದು
ಗಾಢವಾಗಿ ಮೂತ್ರ ಬರುವುದು
ಬಲವಾದ ವಾಸನೆಯೊಂದಿಗೆ ಮೂತ್ರ
ಉರಿಮೂತ್ರದಸಮಸ್ಯೆಗೆಪರಿಹಾರವೇನು ?
ಸ್ನಾನ:
ಬೇಸಿಗೆಯಲ್ಲಿ ದಿನಕ್ಕೆರಡು ಬಾರಿಯಾದರೂ ಸ್ನಾನ ಮಾಡಿ. ಶಾಖದಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಬೆಚ್ಚಗಿನ ನೀರನ್ನು ಬಳಸಬಹುದು. ಎಸಿಗಳು ಮತ್ತು ಫ್ಯಾನ್ಗಳನ್ನು ಬಳಸಿ. ಚೆನ್ನಾಗಿ ಗಾಳಿ ಇರುವ ಪ್ರದೇಶಗಳಲ್ಲಿ ಇರಿ.
ಹೆಚ್ಚುನೀರುಕುಡಿಯಿರಿ:
ಉರಿಮೂತ್ರದ ಸಮಸ್ಯೆ ಕಡಿಮೆಯಾಗಬೇಕೆಂದರೆ ನೀವು ಮೊದಲು ಮಾಡಬೇಕಾದ ಕೆಲಸ ಹೆಚ್ಚೆಚ್ಚು ನೀರು ಕುಡಿಯಬೇಕು. ಅದು ನೀರು, ಎಳನೀರು, ಜ್ಯೂಸ್, ನೀರು ತುಂಬಿದ ತರಕಾರಿಗಳು ಯಾವುದೇ ರೂಪದಲ್ಲಾದರೂ ಸರಿ. ನೀರಿನಂಶವುಗಳ್ಳ ಹಣ್ಣು, ತರಕಾರಿಗಳನ್ನು ಹೆಚ್ಚು ಕುಡಿಯುವುದರಿಂದಲೂ ಉರಿಮೂತ್ರದ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.
ವಿಟಮಿನ್ಸಿಹೆಚ್ಚುಸೇವಿಸಿ
ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಉರಿಮೂತ್ರ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ವಿಟಮಿನ್ ಸಿ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ದ್ರಾಕ್ಷಿ ಹಾಗೂ ಕೀವಿ ಹಣ್ಣುಗಳನ್ನು ತಿನ್ನುವುದರಿಂದ ಉರಿ ಮೂತ್ರವನ್ನು ನಿಯಂತ್ರಣಕ್ಕೆ ತರಬಹುದು. ವಿಟಮಿನ್ ಸಿ ಮೂತ್ರದ ಆಮ್ಲೀಯತೆಯನ್ನು ಹೆಚ್ಚಿಸುವ ಮೂಲಕ ಕೆಲಸ ಮಾಡುತ್ತದೆ ಎಂದು ಭಾವಿಸಲಾಗಿದೆ, ಇದರಿಂದಾಗಿ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
ಸಿಹಿಗೊಳಿಸದಕ್ರ್ಯಾನ್ಬೆರಿರಸವನ್ನುಕುಡಿಯಿರಿ:
ಸಿಹಿಗೊಳಿಸದ ಕ್ರ್ಯಾನ್ಬೆರಿ ರಸವನ್ನು ಕುಡಿಯುವುದು ಮೂತ್ರನಾಳದ ಸೋಂಕುಗಳಿಗೆ ಅತ್ಯಂತ ಪ್ರಸಿದ್ಧವಾದ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಸಿಹಿಗೊಳಿಸದ ಕ್ರ್ಯಾನ್ಬೆರಿ ರಸವನ್ನು ಕುಡಿಯುವುದು ಇಷ್ಟವಿಲ್ಲದಿದ್ದರೆ ಇದನ್ನು ಕ್ಯಾಪ್ಸುಲ್ ರೂಪದಲ್ಲಿ ತೆಗೆದುಕೊಳ್ಳಬಹುದು. ಕ್ರ್ಯಾನ್ಬೆರಿಗಳು ಮೂತ್ರದ ಪ್ರದೇಶಕ್ಕೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾವನ್ನು ತಡೆಗಟ್ಟುವ ಮೂಲಕ ಕಾರ್ಯನಿರ್ವಹಿಸುತ್ತವೆ, ಹೀಗಾಗಿ ಸೋಂಕನ್ನು ತಡೆಯುತ್ತದೆ.
ಆಹಾರಸೇವಿಸಿದಬಳಿಕಸೋರೆಕಾಯಿರಸ:
ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಸಹ ಉರಿಯೂತ್ರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದಲೂ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.
ನಿಂಬೆ ರಸ
ಜನನಾಂಗದ ಹರ್ಪಿಸ್ ಮತ್ತು ಗೊನೊರಿಯಾ, ಮೂತ್ರಪಿಂಡದ ಸೋಂಕು, ಮೂತ್ರಪಿಂಡದ ಕಲ್ಲು, ಪ್ರಾಸ್ಟ್ರೇಟ್ ಸೋಂಕು, ಲೈಂಗಿಕ ರೋಗ, ಸಾಬೂನು, ಸುಗಂಧ ದ್ರವ್ಯ, ಇತರೆ ಉತ್ಪನ್ನಗಳು, ಮೂತ್ರನಾಳದ ಕಿರಿದಾಗುವಿಕೆ, ಯೋನಿ ನಾಳದ ಉರಿಯೂತ, ಯೋನಿ ಯೀಸ್ಟ್ ಸೋಂಕು ಕಾರಣವಾಗಿದೆ. ಮನೆಮದ್ದಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಿರಿ.