ದೇಶದ ಇತಿಹಾಸ ತಿರುಚಿ ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸಿ, ಕೃಷಿ, ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುತ್ತಿರುವ ಶಕ್ತಿಗಳ ವಿರುದ್ಧ ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಸಂವಿಧಾನ ಮತ್ತು ಅದರ ಆಶಯಗಳ ಉಳಿವಿದೆ ಬೃಹತ್ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ನವದೆಹಲಿಯ ರಾಕೇಶ್ ಟಿಕಾಯತ್ ಹೇಳಿದರು.
ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಪ್ರಾರಂಭವಾದ 10 ನೇ ಮೇ ಸಾಹಿತ್ಯ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶವು ಇಂದು ಕಠಿಣ ಸನ್ನಿವೇಶ ಎದುರಿಸುತ್ತಿದೆ.ಒಂದು ದೇಶ ,ಒಂದು ಚುನಾವಣೆ ಎಂದು ಹೇಳುವ ಮೂಲಕ ಬಹುತ್ವದ ಆಶಯಕ್ಕೆ, ಒಕ್ಕೂಟ ವ್ಯವಸ್ಥೆಗೆ ರಾಜ್ಯಗಳ ಸ್ವಾಯತ್ತತೆ,ಅಸ್ಮಿತೆಗೆ ಧಕ್ಕೆ ತರುವ ಯತ್ನಗಳು ನಡೆದಿವೆ. ದೆಹಲಿಯಲ್ಲಿ ನಡೆಸಿದ 13 ತಿಂಗಳ ಕಾಲದ ರೈತ ಆಂದೋಲನದಲ್ಲಿ ದೇಶದ ಜನತೆ ಹಾಗೂ ಭಾರತ ಸರ್ಕಾರ ಮುಖಾಮುಖಿಯಾಗಿದ್ದವು. ಚಳವಳಿಯಲ್ಲಿ ಯಾವುದೇ ವಿಪಕ್ಷಗಳು ರೈತರು ಯಾವುದೇ ಭಾಷೆ, ಧರ್ಮದ ಆಧಾರದಲ್ಲಿ ಒಂದಾಗದೇ ಕೇವಲ ಕೃಷಿಕರು ಮಾತ್ರ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಸಂಘಟಿತರಾಗಿ ಹೋರಾಡಿದರು.
ದೇಶದ ಜನರನ್ನು ಕಳೆದ ಸುಮಾರು 25 ವರ್ಷಗಳಿಂದ ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ಎಗ್ಗಿಲ್ಲದೇ ಸಾಗಿವೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಿದೆ. ದೇಶದ ಜನತೆ ಇದೆಲ್ಲವನ್ನೂ ಶಾಂತಿಯುತವಾಗಿ ಗಮನಿಸುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ .ಶಿಕ್ಷಣ, ಕೃಷಿ ಕಾರ್ಪೋರೇಟ್ ವಲಯಕ್ಕೆ ಮಾರಾಟ ಮಾಡುತ್ತ. ದೇಶದ ನೈಜ ಇತಿಹಾಸ ಮುಚ್ಚಿಹಾಕಿ ತಮ್ಮದೇ ಆದ ಇತಿಹಾಸ ಬರೆಸಲು ಹೊರಟವರಿಗೆ ದೇಶದ ಆದಿವಾಸಿ,ಬುಡಕಟ್ಟು,ದಲಿತರು ಬೇಕಾಗಿಲ್ಲ ಇದರ ವಿರುದ್ಧ ದೊಡ್ಡ ಜನಾಂದೋಲನದ ಅಗತ್ಯವಿದೆ ಎಂದು ರಾಕೇಶ್ ಟಿಕಾಯತ್
ತೆಲಂಗಾಣದ ಕವಿ,ಹೋರಾಟಗಾರ್ತಿ ಜೂಪಕ ಸುಭದ್ರ ದಿಕ್ಸೂಚಿ ಮಾತುಗಳನ್ನಾಡಿ, ದೇಶವು ಯಾರೊಬ್ಬರ ಸರ್ವಾಧಿಕಾರದಲ್ಲಿ ಮುಂದೆ ಸಾಗಬಾರದು, ಧಾರ್ಮಿಕ, ಸಾಮಾಜಿಕ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಪ್ರತಿಯೊಬ್ಬರು ಇದೇ ಧರ್ಮ ಅನುಸರಿಸಿ ಎಂದು ಯಾರೂ ಕೂಡ ನಿರ್ದೇಶನ ಕೊಡಲು ಸಾಧ್ಯವಿಲ್ಲ. ಅನೇಕ ದಮನಕಾರಿ ಪ್ರಕ್ರಿಯೆಗಳ ಮಧ್ಯೆಯೂ ಎದೆಗುಂದದ ಈ ದೇಶದ ರೈತರು ಪ್ರಭುತ್ವದ ವಿರುದ್ಧ ವರ್ಷಗಟ್ಟಲೇ ಹೋರಾಡಿದ್ದು,ದೇಶದ ಜನಸಾಮಾನ್ಯರಲ್ಲಿನ ರೋಷಕ್ಕೆ ಸಾಕ್ಷಿಯಾಗಿದೆ. ನಮ್ಮ ಯಲ್ಲಮ್ಮ,ಹುಲಿಗೆಮ್ಮ,ದುರ್ಗಮ್ಮ ದೇವರುಗಳನ್ನು ಅಲಕ್ಷಿಸಿ.ತಾವು ಪೂಜಿಸುವವರು ಮಾತ್ರ ದೇವರು ಎಂದು ಬಿಂಬಿಸುವುದು ಆರ್ ಎಸ್ ಎಸ್ ನ ಮನೋಧರ್ಮವಾಗಿದೆ.ಸಾಹಿತ್ಯ ಎನ್ನುವುದು ಜನಪರವಾಗಿರಬೇಕು ಎಂಬ ಆಶಯದ ಮೇ ಸಾಹಿತ್ಯ ಮೇಳ ನಡೆಯುತ್ತಿರುವುದು ಸಂತಸ ಎಂದರು.
ಕೊಂಕಣಿ ಕವಿ,ಹೋರಾಟಗಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪಣಜಿಯ ದಾಮೋದರ ಮೌಜೋ ಮಾತನಾಡಿ,ಸಂವಿಧಾನವು ನಾವು ಪ್ರತಿಯೊಬ್ಬರಿಗೂ ಸೇರಿದ್ದಾಗಿದೆ. ಜಲಾಲುದ್ದೀನ್ ರೂಮಿ ಹೇಳಿದ ಹಾಗೆ ಹೃದಯದಿಂದ ಬಂದ ಮಾತು,ಸಾಹಿತ್ಯ ಸರಳವಾಗಿ ಮತ್ತೊಬ್ಬರ ಎದೆಗೆ ದಾಟುತ್ತವೆ. ಆದರೆ ಇತರರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳದವರು “ಮನ್ ಕಿ ಬಾತ್ ” ಮಾತುಗಳನ್ನಾಡುತ್ತಿರುವುದು ಕೃತ್ರಿಮ ನಟನೆಯಾಗಿದೆ. ಸಮಾಜದ